Advertisement

ಪರೀಕ್ಷೆ ಬರೆದು ಹೊರಬರುತ್ತಿದ್ದ 4 ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಇರಿದ ವಿದ್ಯಾರ್ಥಿಗಳ ತಂಡ

01:37 PM Dec 12, 2021 | Team Udayavani |

ಹೊಸದಿಲ್ಲಿ: ಹತ್ತನೇ ತರಗತಿಯ ಪರೀಕ್ಷೆ ಬರೆದು ಹೊರಬರುತ್ತಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಬೇರೊಂದು ಶಾಲೆಯ ವಿದ್ಯಾರ್ಥಿಗಳ ತಂಡವೊಂದು ಅಟ್ಟಾಡಿಸಿ ಇರಿದ ಘಟನೆ ಪೂರ್ವ ದೆಹಲಿಯಲ್ಲಿ ಶನಿವಾರದಂದು ನಡೆದಿದೆ.

Advertisement

ಪೂರ್ವ ದೆಹಲಿಯಲ್ಲಿರುವ ಮಯೂರ್ ವಿಹಾರ್ ನಲ್ಲಿರುವ ಬಾಲ ವಿದ್ಯಾಲಯದಲ್ಲಿ ಹತ್ತನೇ ತರಗತಿ ಪರೀಕ್ಷೆ ನಡೆಯುತ್ತಿತ್ತು ಈ ವೇಳೆ ಪರೀಕ್ಷೆ ಮುಗಿಸಿ ಶಾಲೆಯಿಂದ ಹೊರಬರುತ್ತಿದ್ದಂತೆ ಬೇರೊಂದು ಶಾಲೆಯ ವಿದ್ಯಾರ್ಥಿಗಳ ಗುಂಪೊಂದು ನಾಲ್ವರು ವಿದ್ಯಾರ್ಥಿಗಳನ್ನು ಕಾದುಕುಳಿತು ಬೆನ್ನಟ್ಟಿದ್ದಾರೆ, ಇದನ್ನು ಗಮನಿಸಿದ ನಾಲ್ವರು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಲು ಪಕ್ಕದಲ್ಲಿರುವ ಪಾರ್ಕಿನೊಳಗೆ ಓಡಿದ್ದಾರೆ ಆದರೆ ಬೆನ್ನುಬಿಡದ ದಾಳಿಕೋರ ವಿದ್ಯಾರ್ಥಿಗಳ ತಂಡ ಪಾರ್ಕಿನೊಳಕೆ ನಾಲ್ವರು ವಿದ್ಯಾರ್ಥಿಗಳಿಗೆ ಚೂರಿಯಿಂದ ಇರಿದಿದ್ದಾರೆ, ಘಟನೆಯಿಂದ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಅವರನ್ನು ಕೂಡಲೇ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಾಲ್ವರಲ್ಲಿ ಮೂವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಆದರೆ ಓರ್ವನಿಗೆ ಚಿಕಿತ್ಸೆ ಮುಂದುವರೆದಿದ್ದು ಅಪಾಯದಿಂದ ಪಾರಾಗಿದ್ದಾನೆ.

ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಗೌತಮ್, ರೆಹಾನ್, ಫೈಜಾನ್ ಮತ್ತು ಆಯುಷ್ ಎಂದು ಗುರುತಿಸಲಾಗಿದೆ. ಇವರು ತ್ರಿಲೋಕಪುರಿ ಸರ್ಕಾರಿ ಬಾಲಕರ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಾಗಿದ್ದು ಪರೀಕ್ಷೆಗಾಗಿ ಸರ್ವೋದಯ ಬಾಲ ವಿದ್ಯಾಲಯ ಕೇಂದ್ರಕ್ಕೆ ಬಂದಿದ್ದರು.

ಗಾಯಗೊಂಡ ವಿದ್ಯಾರ್ಥಿಗಳು 15 -16 ವರ್ಷದ ವಿದ್ಯಾರ್ಥಿಗಳಾಗಿದ್ದರೆ.

ಇದನ್ನೂ ಓದಿ : ಮತಾಂತರ ತಡೆ ಕಾನೂನು ತರುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

Advertisement

ಘಟನೆ ಕುರಿತು ಪೊಲೀಸ್ ಠಾಣೆಗೆ ಮೂರು ಕರೆಗಳು ಬಂದಿದ್ದು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿಗಳ ಘರ್ಷಣೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next