Advertisement
ಶಾಸಕ ಜೆ.ಆರ್. ಲೋಬೋ ಅವರು ಶಿಲಾನ್ಯಾಸ ನೆರವೇರಿಸಿ, ಒಂದು ವರ್ಷದ ಹಿಂದೆ ಕಾರ್ಮಿಕ ಭವನ ಕಟ್ಟಡಕ್ಕೆ ಮಂಜೂರಾತಿ ದೊರೆತಿದೆ. ಈ ಪ್ರದೇಶದಲ್ಲಿ ಕೆಪಿಟಿ, ಐಟಿಐ, ಮಹಿಳಾ ಐಟಿಐ ಇದ್ದು, ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಕಾರ್ಮಿಕರ ವಿವಿಧ ಕಾರ್ಯಕ್ರಮಗಳನ್ನು ಜರಗಿಸಲು, ಇಲಾಖೆಗಳ ಕಾರ್ಯಕ್ರಮ ಹಾಗೂ ಕಾರ್ಮಿಕರಿಗೆ ತರಬೇತಿಯನ್ನು ಕೊಡುವಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಲಿದೆ ಎಂದರು.
ಸುಮಾರು 50 ಸೆಂಟ್ಸ್ ಜಾಗವಿರುವ ಈ ಪ್ರದೇಶದಲ್ಲಿ ಜಿ+2 ಮಾದರಿಯಲ್ಲಿ ಕಟ್ಟಡವನ್ನು ಕಟ್ಟಲಾಗುವುದು. ಕೆಳ ಅಂತಸ್ತು ಕೂಡ ಇರುತ್ತದೆ. ಕಟ್ಟಡದ ವಿಸ್ತೀರ್ಣ 11,000 ಚದರಡಿ ಇದೆ. ಒಂದು ವರ್ಷದ ಅವಧಿಯಲ್ಲಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು. ಪಾಲಿಕೆಯ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ನಾಗರಾಜ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ರವಿಕುಮಾರ್, ದಾಸ್ ಪ್ರಕಾಶ್ ಹಾಗೂ ರಮಾನಂದ ಪೂಜಾರಿ, ಚೇತನ್ ಕುಮಾರ್ ಉಪಸ್ಥಿತರಿದ್ದರು.