ಮಣಿಪಾಲ: ಮಾಹೆ ಟ್ರಸ್ಟ್ ಅಧ್ಯಕ್ಷರೂ ಆದ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥರಾದ ಡಾ| ರಂಜನ್ ಪೈ ಅವರು ಹಾವಂಜೆಯಲ್ಲಿ ಮಣಿಪಾಲ ಪ್ರಶಾಮಕ ಆರೈಕೆ ಕೇಂದ್ರದ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಿದರು.
ಮಣಿಪಾಲ ಹಾಸ್ಪೈಸ್ ಮತ್ತು ರಿಸ್ಪ್ಟ್ ಸೆಂಟರ್ ರೋಗಿಗಳ ಆರೋ ಗ್ಯ ಸ್ಥಿತಿಗೆ ಅನುಗುಣವಾಗಿ ಉನ್ನತ ದರ್ಜೆಯ ಆರೈಕೆಯನ್ನು ಒದಗಿ ಸುವ ಗುರಿಯನ್ನುಹೊಂದಿದೆ. ಗುಣ ಪಡಿಸಲಾಗದ, ದೀರ್ಘ ಕಾಲದ ಕಾಯಿಲೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಅಸಾಧಾರಣ ಬೆಂಬಲ, ರೋಗಲಕ್ಷಣ ನಿರ್ವಹಣೆ, ಘನತೆ ಮತ್ತು ಸೌಕರ್ಯ ವನ್ನು ನೀಡುವುದು ಇದರ ಉದ್ದೇಶ.
ಈ ಕೇಂದ್ರವು 100 ಹಾಸಿಗೆಯ ಒಳರೋಗಿಗಳ ಸೌಲಭ್ಯ ಹೊಂದಿದೆ. ದೇಶದಲ್ಲಿ 2ನೇ ಅತೀ ದೊಡ್ಡ ಆಸ್ಪತ್ರೆ, ವಿಶ್ವವಿದ್ಯಾನಿಲಯ ಎರಡಕ್ಕೂ ಸಂ ಯೋಜಿತವಾದ ಮೊದಲ ಸೌಲಭ್ಯ ಇಲ್ಲಿರಲಿದೆ. ಒಂದೇ ಸ್ಥಳದಲ್ಲಿ ಪ್ರಶಾಮಕ ಆರೈಕೆ ಸೇವೆಗಳನ್ನು ನೀಡುತ್ತದೆ. ಕ್ಯಾನ್ಸರ್ ಮತ್ತು ಕ್ಯಾನ್ಸರ್ ಅಲ್ಲದ ಪರಿಸ್ಥಿತಿ ನಿರ್ವಹಣೆ, ಗುಣಪಡಿಸಲಾಗದ ಕಾಯಿಲೆಗಳ ವಿಭಾಗದಲ್ಲೂ ಸೇವೆ ಸಲ್ಲಿಸಲಿದೆ.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಶರತ್ ಕೆ. ರಾವ್, ಕುಲಸಚಿವ ಡಾ| ಗಿರಿಧರ್ ಕಿಣಿ, ಡಾ| ಎನ್.ಎನ್. ಶರ್ಮ, ಡಾ| ದಿಲೀಪ್ ನಾಯಕ್, ಹರಿನಾರಾಯಣ ಶರ್ಮ, ಮಣಿಪಾಲ್ ಫೌಂಡೇಶನ್ ಸಿಇಒ ಸಿ.ಜಿ. ಮುತ್ತಣ್ಣ, ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಕೆಎಂಸಿ ಮಂಗಳೂರು ಡೀನ್ ಡಾ| ಉಣ್ಣಿಕೃಷ್ಣನ್, ಕೆಎಂಸಿ ಮಣಿಪಾಲದ ಸಹ ಡೀನ್ ಹಾಗೂ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥ ಡಾ| ನವೀನ್ ಸಾಲಿನ್ಸ್ ಸಹಿತವಾಗಿ ಮಾಹೆ ವಿ.ವಿ.ಯ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.