Advertisement

“ಫಾರ್ವರ್ಡ್‌’ಗೆ ಮೆಚ್ಚುಗೆ:ಸುಳ್ಳು ಸುದ್ದಿ ವಿರುದ್ಧ ಪೊಲೀಸರ ಜಾಗೃತಿ

12:01 PM Jul 25, 2018 | Team Udayavani |

ಮುಂಬಯಿ:  ದೇಶಾದ್ಯಂತ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸುಳ್ಳು ಫಾರ್ವರ್ಡ್‌ ಸಂದೇಶಗಳು ಸಾಮೂಹಿಕ ಥಳಿತ, ಅಮಾಯಕರ ಹತ್ಯೆಗೆ ಕಾರಣವಾಗು ತ್ತಿರುವ ಸಂದರ್ಭದಲ್ಲೇ ಇದರ ಬಗ್ಗೆ ಜಾಗೃತಿ ಮೂಡಿಸಲು ಮುಂಬಯಿ ಪೊಲೀಸರು ಬಳಸಿರುವ ಕ್ರಿಯಾಶೀಲ ಟ್ವೀಟ್‌ವೊಂದು ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಉತ್ತರಪ್ರದೇಶ ಪೊಲೀಸರು ಇತ್ತೀಚೆಗೆ ಸೇಕ್ರೆಡ್‌ ಗೇಮ್ಸ್‌ ಮೀಮ್‌ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದ ಬೆನ್ನಲ್ಲೇ ಅದೇ ಹಾದಿ ಹಿಡಿದಿರುವ ಮುಂಬೈ ಪೊಲೀಸರು, “ಶಿಲಾಯುಗ’ದ ಪ್ರಸ್ತಾಪದ ಮೂಲಕ ಸುಳ್ಳು ಸಂದೇಶಗಳ ತಡೆಗೆ ಯತ್ನಿಸಿದ್ದಾರೆ. ಮೊಬೈಲ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ ಅನ್ನು ಮುಂದಿಟ್ಟುಕೊಂಡು ಶಿಲಾಯುಗದ ಮಾನವನೊಬ್ಬ ಕುಳಿತಿರು ವಂಥ ಚಿತ್ರವನ್ನು ಪೋಸ್ಟ್‌ ಮಾಡಿರುವ ಪೊಲೀಸರು, ಅದರಲ್ಲಿ “ಕೆಲವೊಂದು ಫಾರ್ವರ್ಡ್‌ ಸಂದೇಶಗಳು ಮಾನವನನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಹಿಂದಕ್ಕೆ (ಬ್ಯಾಕ್‌ವರ್ಡ್‌) ಕೊಂಡೊಯ್ಯು ತ್ತವೆ’ ಎಂಬ ಬರಹವನ್ನೂ ಲಗತ್ತಿಸಿದ್ದಾರೆ. ಆ ಮೂಲಕ ಕೆಲ ಫಾರ್ವರ್ಡ್‌ ಮೆಸೇಜ್‌ಗಳು ನಮ್ಮನ್ನು ನಾಗರಿಕತೆಯಿಂದ ಅನಾಗರಿಕತೆ ಯತ್ತ ಕೊಂಡೊಯ್ಯುತ್ತವೆ. ಅದು ದೇಶದ ಪ್ರಗತಿಗೆ ಮಾರಕ ಎಂಬ ಸಂದೇಶವನ್ನು ಮುಂ ಬಯಿ ಪೊಲೀಸರು ನೀಡಿದ್ದಾರೆ. ಈ ಟ್ವೀಟ್‌ ಅನ್ನು ಹಲವರು ಶ್ಲಾ ಸಿದ್ದು, ಮುಂಬಯಿ ಪೊಲೀಸರಿಗೆ ಹ್ಯಾಟ್ಸ್‌ಆಫ್ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next