Advertisement

ಮಹದಾಯಿ ಪಾದಯಾತ್ರೆ ಸಂಪನ್ನ

01:26 PM Mar 11, 2017 | Team Udayavani |

ಧಾರವಾಡ: ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಅನುಷ್ಠಾನ, ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವಲಗುಂದ ಪಟ್ಟಣದಿಂದ ಮೂರು ದಿನಗಳ ಹಿಂದೆಯೇ (ಮಾ.8ಕ್ಕೆ ) ಆರಂಭಗೊಂಡ ಮಲಪ್ರಭಾ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿಯ ಪಾದಯಾತ್ರೆಗೆ ಶುಕ್ರವಾರ ನಗರದ ಡಿಸಿ ಕಚೇರಿಗೆ ತಲುಪಿ ಅಂತ್ಯಗೊಂಡಿತು.

Advertisement

ಈ ಪಾದಯಾತ್ರೆಗೆ ಧಾರವಾಡ ವಕೀಲರ ಸಂಘ ಹಾಗೂ ಕಡನ್ನಪರ ಸಂಘಟನೆಗಳು ಸ್ವಾಗತ ಕೋರಿದ್ದು ಅಲ್ಲದೇ ಪಾದಯಾತ್ರೆಗೆ ಸಾಥ್‌ ನೀಡಿದವು. ನಂತರ ಕಲಾಭವನದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ರೈತರು, ವಿವಿಧ ಸಂಘಟನೆಗಳ ಮುಖಂಡರು ಜ್ಯುಬ್ಲಿ ವೃತ್ತ, ಕೋರ್ಟ್‌ ಸರ್ಕಲ್‌ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಸಮಾವೇಶವಾಗಿ ಮಾರ್ಪಟ್ಟಿತು. 

ಮೆರವಣಿಗೆಯುದ್ಧಕ್ಕೂ ಜಗ್ಗಲಗಿ ಮೇಳದ ಮೂಲಕ  ಆಗಮಿಸಿದ ರೈತರು, ಶುಕ್ರವಾರ ಸಂಜೆ ವರೆಗೂ ಡಿಸಿ ಕಚೇರಿ ಎದುರು ಪ್ರತಿಭಟನಾ ಧರಣಿ ಕೈಗೊಂಡರು. ನಂತರ ಮನವಿ ಸ್ವೀಕರಿಸಿ ಪ್ರತಿಭಟನೆ  ಕೈಬಿಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರೂ ಅದಕ್ಕೆ ಮಣಿಯದ ಪ್ರತಿಭಟನಾಕಾರರು, ಮೂರು ದಿನಗಳಿಂದ ನವಲಗುಂದದಿಂದ ಧಾರವಾಡವರೆಗೂ ಪಾದಯಾತ್ರೆ ಕೈಗೊಂಡರೂ ಯಾವ ಜನಪ್ರತಿನಿಧಿ ಧಿಗಳು ಬಂದಿಲ್ಲ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಬರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಉಸ್ತವಾರಿ ಸಚಿವರ ಗಮನಕ್ಕೆ ತರುವುದಾಗಿ ಹೇಳಿ ಅಲ್ಲಿಂದ ತೆರಳಿದರು. ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, 590 ದಿನ ನವಲಗುಂದದಲ್ಲಿ ಹೋರಾಟ ನಡೆಸಿದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಣ್ಣು ತೆರೆದು ನೋಡುತ್ತಿಲ್ಲ. ಕುಡಿಯುವ ನೀರಿಗಾಗಿ ರಾಜಕಾರಣ ಮಾಡುತ್ತಿರುವ ಉಭಯ ಸರ್ಕಾರಗಳ ಕಣ್ಣು ತೆರೆಸುವಂತ ಕೆಲಸಕ್ಕೆ ರೈತರೇ ಮುಂದಾಗಬೇಕಿದೆ. 

ಸಾಲದ ಸುಳಿಗೆ ಸಿಲುಕಿರುವ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಾ ಚುನಾವಣೆ ನಂತರ  ಸಮಸ್ಯೆ ಬಗೆಹರಿಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ್‌ ಜೋಶಿ ಹೇಳಿಕೆ ನೀಡುತ್ತಿದ್ದಾರೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ತಕ್ಕಪಾಠ ಕಲಿಸುವುದಾಗಿ ಎಚ್ಚರಿಸಿದರು. ಹೋರಾಟದಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಒಂದು ಲಕ್ಷ ಪರಿಹಾರನೀಡಬೇಕು.

Advertisement

ಅಧಿಕಾರ ದುರ್ಬಳಕೆ ಮಾಡಿದ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಬೇಕು.  ದುಡಿಯುವ ಕೂಲಿ ಕಾರ್ಮಿಕರಿಗೆ ನೀಡಬೇಕು. ಮಾ.19ರೊಳಗೆ ಈ ಬೇಡಿಕೆ ಈಡೇರಿಸದಿದ್ದಲ್ಲಿ ಕಳಸಾ ಹೋರಾಟದಲ್ಲಿ ಸಂಭವಿಸುವ ಅವಘಡಗಳಿಗೆ ಕೇಂದ್ರ-ರಾಜ್ಯ ಸರ್ಕಾರ ಹೊಣೆ ಎಂದರು. ನಂತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನೂರಾರ ರೈತರ ಮಹಿಳೆಯರು, ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next