Advertisement
ಗೋಧಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 150 ರೂ. ಹೆಚ್ಚಳ ಮಾಡಲಾಗಿದ್ದು, ಬೆಲೆ 2,425 ರೂ.ಗೆ ಏರಿಕೆ ಯಾಗಿದೆ. ಸಾಸಿವೆ ಬೆಲೆಯನ್ನು ಕ್ವಿಂಟಾಲ್‌ಗೆ 300 ರೂ. ಏರಿಸಿದ್ದು, 5,650 ರೂ.ನಿಂದ 5,950 ರೂ.ಗೆಏರಿದೆ. ಕಡಲೆ ಕಾಳಿನ ಬೆಂಬಲ ಬೆಲೆಯನ್ನು 210 ರೂ. ಹೆಚ್ಚಿಸಲಾಗಿದೆ.
ರೈತರಿಗೆ ಲಾಭ ಒದಗಿಸುವ ಜತೆಗೆ ಮಾರುಕಟ್ಟೆ ದರವನ್ನು ನಿಯಂತ್ರಿಸುವ ಪ್ರಧಾನಮಂತ್ರಿ ಅನ್ನದಾತ ಅಯಾ ಸಂರಕ್ಷಣ ಅಭಿಯಾನ ಯೋಜನೆಗೆ 35,000 ಕೋಟಿ ರೂ. ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸುಗ್ಗಿಯ ಸಮಯದಲ್ಲಿ ರೈತರು ಬೆಲೆ ಕುಸಿತದಿಂದ ಕಂಗಾಲಾಗುವುದನ್ನು ಈ ಯೋಜನೆ ತಪ್ಪಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.