Advertisement

ಕೋಟೆ : ಮಲ್ಟಿ ಪರ್ಪಸ್‌ ಸಾರ್ವಜನಿಕ ಹಿಂದೂ ರುದ್ರಭೂಮಿ

05:43 PM Jul 30, 2019 | sudhir |

ಕಟಪಾಡಿ:ಎಲ್ಲೆಡೆಯಲ್ಲಿ ಗದ್ದೆಗಳನ್ನು ಹಡೀಲು ಬಿಡುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಶ್ಮಶಾನದ ಒಳಗಡೆ ಲಭ್ಯ ಸ್ಥಳವನ್ನು ಗದ್ದೆಯನ್ನಾಗಿಸಿ ಪಕ್ಷಿಗಳಿಗಾಗಿ ಭತ್ತದ ಬೇಸಾಯ ಮಾಡುವ ಕೋಟೆ ಗ್ರಾಮ ಪಂಚಾಯತ್‌ನ  ಕೃಷಿ ಪ್ರೇಮ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್‌ ಸದಸ್ಯೆ ಗೀತಾಂಜಲಿ ಎಂ.ಸುವರ್ಣ ಹೇಳಿದರು.

Advertisement

ಅವರು ಜು.28ರಂದು ಕೋಟೆ ವಿನೋಭಾ ನಗರದಲ್ಲಿರುವ ಇದರ ಸಾರ್ವಜನಿಕಹಿಂದೂ ರುದ್ರಭೂಮಿ ಚರಮಧಾಮದಲ್ಲಿ ನೇಜಿ ನಾಟಿಯನ್ನು ನಡೆಸಿ ಮಾತನಾಡಿದರು.

ಇದೊಂದು ಮಾದರಿಯಾದ ಕೃಷಿಯಾಗಿದೆ. ಪಂಚಾಯತ್‌ ಸದಸ್ಯ ರತ್ನಾಕರ ಕೋಟ್ಯಾನ್‌ ಅವರ ಪರಿಸರ ಪ್ರೇಮದಿಂದ ಇಂತಹ ಯೋಜನೆಗಳು ರೂಪು ಪಡೆದುಕೊಳ್ಳುತ್ತಿದೆ. ಜನಪ್ರತಿನಿಧಿಗಳು ಸೇರಿಕೊಂಡು ಗದ್ದೆ ನಾಟಿಯನ್ನು ಪೂರೈಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೋಟೆ ಗ್ರಾ.ಪಂ. ಅಧ್ಯಕ್ಷೆ ಕೃತಿಕಾ ರಾವ್‌ ಮಾತನಾಡಿ, ಪಂಚಾಯತ್‌ ಮಟ್ಟದಲ್ಲಿ ಇದೊಂದು ಮಾದರಿ ಕೃಷಿಯಾಗಿದೆ. ಇದನ್ನು ಇನ್ನಷ್ಟು ಉತ್ತೇಜಿಸುವ ಬಯಕೆ ವ್ಯಕ್ತಪಡಿಸಿದರು.

ಗ್ರಾ.ಪಂ.ಉಪಾಧ್ಯಕ್ಷ, ನ್ಯಾಯವಾದಿ ಗಣೇಶ್‌ ಕುಮಾರ್‌ ಮಟ್ಟು ಮಾತನಾಡಿ, ಈಗಾಗಲೇ ಇಂಗು ಗುಂಡಿ, ಹಣ್ಣು ಹಂಪಲು ಗಿಡಗಳು, ಸುಂದರ ಪರಿಸರವನ್ನು ಶ್ಮಶಾನದೊಳಗೆ ನಿರ್ಮಿಸಲಾಗಿದೆ. ನಮ್ಮ ಆಹಾರಕ್ಕಾಗಿ ನಾವು ಸ್ವಾಲಂಬಿಗಳಾಗಬೇಕು ನಿಜ. ಆದರೆ ಇಲ್ಲಿ ಸುಂದರ ಪರಿಸರಕ್ಕೆ ಆಗಮಿಸುವ ಪಕ್ಷಿ ಸಂಕುಲಗಳೂ ಆಹಾರದಲ್ಲಿ ಸ್ವಾವಲಂಬಿಗಳಾಗಿರಬೇಕೆಂಬ ಉದ್ದೇಶ ಇರಿಸಿ ಇಲ್ಲಿ ಗದ್ದೆಯನ್ನು ನಿರ್ಮಾಣ ಮಾಡಿ ಭತ್ತದ ಸಸಿ ನಾಟಿ ಮಾಡಲಾಗಿದೆ.

Advertisement

ಆ ಮೂಲಕ ಪಕ್ಷಿಗಳಿಗೆ ಬೇಕಾದ ಭತ್ತ, ಅಕ್ಕಿಯನ್ನು ಪಡೆಯಲು ಪ್ರಯತ್ನ ಸಾಗುತ್ತಿದೆ. ಯಶಸ್ವಿಯಾದಲ್ಲಿ ಇಲ್ಲಿನ ಮತ್ತಷ್ಟು ಸ್ಥಳವನ್ನು ಬಳಸಿಕೊಂಡು ಕೃಷಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಚಿಂತನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಲ್ಟಿ ಪರ್ಪಸ್‌ ಶ್ಮಶಾನದ ಮುತುವರ್ಜಿ ವಹಿಸಿರುವ ಗ್ರಾ.ಪಂ.ಸದಸ್ಯ ರತ್ನಾಕರ ಕೋಟ್ಯಾನ್‌ ಪ್ರತಿಕ್ರಿಯಿಸಿ, ಬೇಸಿಗೆಯಲ್ಲಿ ಬಾನಾಡಿಗಳಿಗೆ ಮಣ್ಣಿನ ಮಡಕೆಗಳಲ್ಲಿ ನೀರುಣಿಸಲಾಗುತ್ತದೆ. ಇಲ್ಲಿ ಪರಿಸರ ಪ್ರಾಣಿ ಪಕ್ಷಿಗಳಿಗೆ ಪೂರಕವಾಗಿರುವುದರಿಂದ ಹೆಚ್ಚಿನ ಧಾನ್ಯ, ಕಾಳುಗಳ ಅವಶ್ಯಕತೆ ಬಾನಾಡಿಗಳಿಗಿದೆ. ಈ ಸಂದರ್ಭ ನಮ್ಮ ಭೂಮಿಯ ರಾಮಾಂಜಿ, ಗ್ರಾ.ಪಂ. ಸದಸ್ಯರಾದ ಲಲಿತಾ ಶೇರಿಗಾರಿ¤, ಶಾಲಿನಿ ಮಟ್ಟು, ವಸಂತಿವಿ.ಪೂಜಾರಿ, ಗೀತಾ ಶೆಣೈ, ಸ್ಥಳೀಯ ಕೃಷಿ ಅನುಭವಸ್ಥರಾದ ಪದ್ಮಿನಿ, ಆಶಾ, ಯಮುನಾ, ಸುನಂದ, ಗ್ರಾ.ಪಂ. ಸಿಬಂದಿ ಪಾಲ್ಗೊಂಡಿದ್ದರು.

ಮಡಕೆಯಲ್ಲೂ ಕೃಷಿ
ಮಡಕೆಯಲ್ಲೂ ಹಟ್ಟಿಗೊಬ್ಬರ ಬಳಸಿಕೊಂಡು ನೇಜಿ ನಾಟಿ ಮಾಡಲಾಗಿದೆ. ಅದರೊಂದಿಗೆ ಮಣ್ಣನ್ನು ಹದಗೊಳಿಸಿ, ಹಟ್ಟಿಗೊಬ್ಬರವನ್ನು ಸೇರಿಸಿಕೊಂಡು ಹಸನುಗೊಳಿಸಿದ ಗದ್ದೆಯನ್ನು ತಯಾರಿಸಿ ನೇಜಿ ನಾಟಿಯನ್ನು ನಡೆಸಲಾಗಿದೆ. ಆ ಮೂಲಕ ಬಾನಾಡಿಗಳಿಗೆ ಅವಶ್ಯಕ ಭತ್ತ ಅಥವಾ ಅಕ್ಕಿ ಕಾಳುಗಳನ್ನು ಪೂರೈಸುವ ಯೋಜನೆ ಇದಾಗಿದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next