Advertisement
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ 21 ಯೋಜನೆಗಳ ಅಭಿವೃದ್ಧಿಯಲ್ಲಿ ಎಚ್.ಡಿ. ಕೋಟೆ ಗರಿಷ್ಠ ಸಾಧನೆಗೈದರೆ, ನಂಜನಗೂಡು ತಾಲೂಕು ಕನಿಷ್ಠ ಸಾಧನೆ ಮಾಡಿದೆ ಎಂದರು.
Related Articles
Advertisement
ಈ ವಿಷಯವನ್ನು ಮೊದಲೇ ತಮ್ಮ ಗಮನಕ್ಕೆ ತಂದಿದ್ದರೆ ಇವೆರಡಕ್ಕೂ ಅನುಮತಿ ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಅನುಮತಿ ಕೊಡಿಸಲು ಪ್ರಯತ್ನಿಸುವುದಾಗಿ ಸಂಸದರು ಭರವಸೆ ನೀಡಿದರು. ಬಹು ನಿರೀಕ್ಷೀತ ಸಸ್ಯ ಕಾಶಿ ಕಾಮಗಾರಿ ಪ್ರಾರಂಭವಾಗಿದ್ದನ್ನು ಉಲ್ಲೇಖೀಸಿದ ಸಂಸದರು, ಮತುವರ್ಜಿ ವಹಿಸಿ ಅಚ್ಚುಕಟ್ಟಾಗಿ ಅಲ್ಲಿ ಉದ್ಯಾನವನ ನಿರ್ಮಿಸಿ ಎಂದು ಸೂಚಿಸಿದರು.
ಸಭೆಗೆ ಹಾಜರಾಗಿ: ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಗ್ರಾಮಸಭೆಗಳಿಗೆ ಕಡ್ಡಾಯವಾಗಿ ಹಾಜರಾದರೆ ಶಾಸಕರು ಹಾಗೂ ಸಂಸದರಿಗೆ ಸಮಸ್ಯೆಗಳು ಎದುರಾಗುವುದಿಲ್ಲ. ಇನ್ನಾದರೂ ಕ್ರಿಯಾಶಿಲರಾಗಿ ಉಳಿದಿರುವ 60 ದಿನಗಳಲ್ಲಿ ಕೆಲಸ ಮಾಡಿ ಕೇಂದ್ರದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಪಂ ಸದಸ್ಯೆ ಮಂಗಳಾ ಮಾತನಾಡಿ, ಭೂಸೇನಾ ನಿಗಮಕ್ಕೆ ವಹಿಸಿದ ಕೆಲಸಗಳು ಅವಧಿ ಮುಗಿದರೂ ಪೂರ್ಣಗೊಂಡಿಲ್ಲ ಎಂದು ದೂರಿದರು.ದಯಾನಂದ ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಹಾಗೂ ಹುಲ್ಲಹಳ್ಳಿ ರಸ್ತೆ ಬದಿಯಲ್ಲಿನ ಮೀನು ಹಾಗೂ ಮಾಂಸದ ಅಂಗಡಿಗಳನ್ನು ತಕ್ಷಣ ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು. ನೋಟಿಸ್ ನೀಡಿ: ಸಭೆಗೆ ಗೈರಾದ ಸಾಮಾಜಿಕ ಅರಣ್ಯ, ಅಕ್ಷರ ದಾಸೋಹ ಹಾಗೂ ಅಬಕಾರಿ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಂಸದರು ಸೂಚಿಸಿದರು. ಸಭೆಯಲ್ಲಿ ಜಿಪಂ ಸಹ ಕಾರ್ಯದರ್ಶಿ ಶಿವಕುಮಾರ್, ಸದಸ್ಯರಾದ ದಯಾನಂದ ಮೂರ್ತಿ, ಪುಷ್ಪಾ, ಲತಾ, ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ತಾಪಂ ಇಒ ಶ್ರೀಕಂಠರಾಜೇ ಅರಸು ಇತರರಿದ್ದರು. ಭತ್ತ ಖರೀದಿಸದ ಅಧಿಕಾರಿಗಳಿಗೆ ತರಾಟೆ: ಕೃಷಿ ಇಲಾಖೆಯ ಪ್ರಗತಿ ಕೈಗೆತ್ತಿಕೊಂಡ ಸಂಸದ ಆರ್. ಧ್ರುವನಾರಾಯಣ್, ಇಲಾಖೆ ಕಳಪೆ ಸಾಧನೆ ತೋರಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಭತ್ತದ ಸುಗ್ಗಿ ಮುಗಿದ ಮೇಲೆ ಭತ್ತ ಖರೀದಿಸುವ ನೀವು ರೈತರ ಪರವೋ ಅಥವಾ ದಲ್ಲಾಳಿಗಳ ಪರವೋ ಎಂದು ತರಾಟೆಗೆ ತೆಗೆದುಕೊಂಡ ಧ್ರುವನಾರಾಯಣ, ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ 1,700 ರೂ. ನಿಗದಿ ಪಡಿಸಿದ್ದು, ಆದರೆ ನೀವು ಖರೀದಿಸಿಲ್ಲ. ಸಾಲ ಮಾಡಿ ಭತ್ತ ಬೆಳೆದ ರೈತರು ಕೇವಲ 1,200 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ನೋಡಿಯೂ ಸುಮ್ಮನಿದ್ದೀರಿ. ಸಂಬಳ ಪಡೆಯುತ್ತಿರುವ ನೀವು ರೈತರು ಹಾಗೂ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದೀರಿ ಎಂದು ಕಿಡಿಕಾರಿದರು.