Advertisement

ಡೀಮ್ಡ್ ಫಾರೆಸ್ಟ್‌ ರಹಿತ ಪಡಿಸುವಂತೆ ಸರಕಾರಕ್ಕೆ ಆಗ್ರಹ

12:51 PM Mar 13, 2017 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ 94ಸಿ ಅರ್ಜಿದಾರರ ಅರ್ಜಿಯನ್ನು ಅತೀ ಶೀಘ್ರದಲ್ಲಿ ವಿಲೇವಾರಿ ಮಾಡುವುದರ ಮೂಲಕ ಅಧಿಕ ಸಂಖ್ಯೆಯಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ.

Advertisement

ಆದರೆ ಕೆಲವು ಅರ್ಜಿಗಳು ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಲ್ಲಿ ಬರುತ್ತಿದ್ದು ಇದರಿಂದಾಗಿ ಹಕ್ಕು ಪತ್ರ  ನೀಡಲು ತೊಡಕಾಗುತ್ತಿದೆ ಈ ನಿಟ್ಟಿನಲ್ಲಿ ಡೀಮ್ಡ್ ಫಾರೆಸ್ಟ್‌ ರಹಿತ ಪಡಿಸುವಂತೆ ರಾಜ್ಯ ಸರಕಾರಕ್ಕೆ ಈಗಾಗಲೇ ಆಗ್ರಹಿಸಲಾಗಿದೆ ಎಂದು ಕಾರ್ಕಳ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ. ಅವರು ಬಜಗೋಳಿಯಲ್ಲಿ  ಮಾ.9 ರಂದು ನಡೆದ ಸವಲತ್ತು ವಿತರಣಾ ಕಾರ್ಯಕ್ರಮ ಹಾಗೂ ಈದು, ನಲ್ಲೂರು ಮಿಯ್ನಾರು, ಮುಡಾರು ಗ್ರಾ.ಪಂ ವ್ಯಾಪ್ತಿಯ 94ಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ 32 ಜನರಿಗೆ 94ಸಿ ಹಕ್ಕು ಪತ್ರ ಹಾಗೂ ಪರಿಹಾರ ಚೆಕ್‌ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಸದಸ್ಯರಾದ ಉದಯ ಎಸ್‌. ಕೋಟ್ಯಾನ್‌, ಮುಡಾರು ಗ್ರಾ.ಪಂ. ಅಧ್ಯಕ್ಷೆ ಗೀತಾ ಪಾಟ್ಕಾರ್‌, ಉಪಾಧ್ಯಕ್ಷ ವಿನಯ ಡಿ. ಬಂಗೇರ, ಮಾಳ ತಾ.ಪಂ. ಸದಸ್ಯೆ ಸೌಭಾಗ್ಯಾ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next