Advertisement

Demolition case; ಮಾಜಿ ಸಚಿವ ಅಜಂ ಖಾನ್ ಮತ್ತು 3 ಮಂದಿ ದೋಷಿ ಎಂದು ತೀರ್ಪು

12:26 AM Mar 17, 2024 | Team Udayavani |

ರಾಮ್‌ಪುರ (ಯುಪಿ): 2016ರಲ್ಲಿ ಡುಂಗರ್‌ಪುರ ಪ್ರದೇಶದಲ್ಲಿ ಮನೆಯೊಂದನ್ನು ಬಲವಂತವಾಗಿ ಕೆಡವಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್ ಮತ್ತು ಇತರ ಮೂವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಶನಿವಾರ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಸೋಮವಾರ ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಎಸ್ ಪಿ ನಾಯಕ ಅಜಂ ಖಾನ್, ನಗರಪಾಲಿಕೆಯ ಮಾಜಿ ಅಧ್ಯಕ್ಷ ಅಜರ್ ಅಹ್ಮದ್ ಖಾನ್ , ಅಲೆ ಹಸನ್ ಮತ್ತು ಬರ್ಕತ್ ಅಲಿ ಅವರನ್ನು ರಾಂಪುರದ ಸಂಸದ-ಶಾಸಕ ನ್ಯಾಯಾಲಯದ ನ್ಯಾಯಾಧೀಶ ವಿಜಯ್ ಕುಮಾರ್ ತಪ್ಪಿತಸ್ಥರು ಎಂದು ಘೋಷಿಸಿದ್ದಾರೆ.

ಇತರ ಮೂವರು ಆರೋಪಿಗಳಾದ ಜಿಬ್ರಾನ್, ಫರ್ಮಾನ್ ಮತ್ತು ಓಮೇಂದ್ರ ಚೌಹಾಣ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

ಸಮಾಜವಾದಿ ಪಕ್ಷದ ಸರ್ಕಾರದ ಅಡಿಯಲ್ಲಿ 2016 ರಲ್ಲಿ ಮನೆಯನ್ನು ಬಲವಂತವಾಗಿ ಕೆಡವಿದ್ದಕ್ಕಾಗಿ 2019 ರಲ್ಲಿ ಒಟ್ಟು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next