Advertisement

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

12:29 AM May 17, 2022 | Team Udayavani |

ಮಂಗಳೂರು: ರಾಷ್ಟ್ರೀಯ ವಿಪತ್ತು ಸ್ಪಂದನ ದಳಕ್ಕೆ ಸಮಾನವಾಗಿ ರಾಜ್ಯದಲ್ಲೂ ರಾಜ್ಯ ವಿಪತ್ತು ಸ್ಪಂದನ ದಳ (ಎಸ್‌ಡಿಆರ್‌ಎಫ್‌)ವನ್ನು ಸ್ಥಾಪಿಸಲಾಗಿದೆ. ಆದರೆ ಅದಕ್ಕೆ ಸಿಬಂದಿ ನಿಯೋಜನೆ ಕುರಿತು ಸ್ಪಷ್ಟತೆ ಇಲ್ಲದೆ ಸದ್ಯ ನಿವೃತ್ತ ಸೈನಿಕರನ್ನೇ ಆಶ್ರಯಿಸುವಂತಾಗಿದೆ.

Advertisement

ಆರಂಭದಲ್ಲಿ ಇದಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆ, ಕರ್ನಾಟಕ ಮೀಸಲು ಪೊಲೀಸ್‌ ಇಲಾಖೆಯಿಂದ ಸಿಬಂದಿಯನ್ನು ನಿಯೋಜಿಸಲಾಗುತ್ತಿತ್ತು. ಆದರೆ ಇವರು ಕೆಲವು ತಿಂಗಳ ಸೇವೆಯ ಬಳಿಕ ಮಾತೃ ಇಲಾಖೆಗೆ ಮರ ಳಲು ಬಯಸುತ್ತಾರೆ.

ಮಿಲಿಟರಿಯಿಂದ ಬರುವವರು ತರಬೇತಾದವರು ಮತ್ತು ಉತ್ತಮ ಆರೋಗ್ಯ ಹೊಂದಿ ದವರೂ ಆಗಿದ್ದು, ಗುತ್ತಿಗೆ ಆಧಾರದಲ್ಲಿ ಎಸ್‌ಡಿಆರ್‌ಎಫ್‌ಗೆ ಸೇರಿಸಲಾಗುತ್ತದೆ. ಸದ್ಯ ಮಂಗಳೂರು ಎಸ್‌ಡಿಆರ್‌ಎಫ್‌ ಕಂಪೆನಿಯಲ್ಲಿ 39 ಸಿಬಂದಿ ಇದ್ದಾರೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಕಲಬುರಗಿಯಲ್ಲಿ ಕಂಪೆನಿಗಳಿವೆ.

ಆಯಾ ವಲಯದ ಮುಖ್ಯ ಅಗ್ನಿಶಾಮಕ ಅಧಿಕಾರಿಯೇ ವಿಪತ್ತು ಸ್ಪಂದನ ಪಡೆಗೆ ಡೆಪ್ಯೂಟಿ ಕಮಾಂಡೆಂಟ್‌ ಆಗಿರುತ್ತಾರೆ. 45 ವರ್ಷ ವಯಸ್ಸಿನೊಳಗಿನ ದೈಹಿಕವಾಗಿ ಸಮರ್ಥರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.

ರಾಜ್ಯ ಪಡೆ ಯಾಕೆ ?
ಕೇಂದ್ರದಿಂದ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯನ್ನು ನಿರ್ವಹಿಸ ಲಾಗುತ್ತಿದ್ದು, ದೊಡ್ಡ ಪ್ರಕೃತಿ ವಿಕೋಪ ಉಂಟಾದಾಗ ಆಗಮಿಸುತ್ತಾರೆ. ಆದರೆ ಪ್ರಾದೇಶಿಕವಾಗಿ ಪ್ರತೀ ಮಳೆಗಾಲ ಮತ್ತಿತರ ಸಣ್ಣಪುಟ್ಟ ವಿಪತ್ತು ಉಂಟಾದಾಗ ಅವರನ್ನು ಕಾಯಲಾಗದು. ಕೂಡಲೇ ಸ್ಪಂದಿಸುವುದಕ್ಕಾಗಿ ಪ್ರತ್ಯೇಕ ತರಬೇತಾದ ಪಡೆ ಬೇಕು ಎನ್ನುವ ಕಾರಣಕ್ಕೆ ಎಸ್‌ಡಿಆರ್‌ಎಫ್‌ನ್ನು 2012ರಲ್ಲಿ ಸೃಜಿಸಲಾಗಿತ್ತು. ಅದು 2014ರಲ್ಲಿ ಪೂರ್ಣರೂಪದಲ್ಲಿ ಅಸ್ತಿತ್ವಕ್ಕೆ ಬಂತು. ಮಂಗಳೂರಿ ನಲ್ಲಿ 2019ರಿಂದ ಎಸ್‌ಡಿಆರ್‌ಎಫ್‌ ತಂಡ ಕಾರ್ಯವೆಸಗುತ್ತಿದೆ. ಪೂರ್ಣರೂಪದ ಈ ಪಡೆ ಪ್ರಸ್ತುತ ಪಾಂಡೇಶ್ವರದ ಅಗ್ನಿಶಾಮಕ ಪಡೆಯ ಕಚೇರಿಯ ವ್ಯಾಪ್ತಿಯಲ್ಲಿದ್ದು, ಸಿಬಂದಿ ಬ್ಯಾರಕ್‌ ಮತ್ತಿತರ ವ್ಯವಸ್ಥೆ ಮಾಡಲಾಗಿದೆ.

Advertisement

ಮಂಗಳೂರಿನಲ್ಲೊಂದು ನೆಲೆ
ಮಂಗಳೂರು ಕಂಪೆನಿ ತಾತ್ಕಾಲಿಕ ನೆಲೆಯಲ್ಲಿ ನಗರದ ಅಗ್ನಿಶಾಮಕ ಇಲಾ ಖೆಯಲ್ಲೇ ಕಾರ್ಯ ನಿರ್ವಹಿಸು ತ್ತಿದೆ. ಆದರೆ ಎಸ್‌ಡಿಆರ್‌ಎಫ್‌ ಮುಂದೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲು ಸಿದ್ಧವಾ ದಾಗ ಅದಕ್ಕೊಂದು ನೆಲೆ ಬೇಕು ಎನ್ನುವ ಕಾರಣಕ್ಕಾಗಿ ಬಡಗ ಎಕ್ಕಾರಿನಲ್ಲಿ 10 ಎಕ್ರೆ ಜಾಗ ಮೀಸಲಿಡಲಾಗಿದೆ. ಇದನ್ನು ತರಬೇತಿ ಕೇಂದ್ರವಾಗಿ, ಸಿಬಂದಿಯ ಕ್ಯಾಂಪ್‌ ಆಗಿ ಬಳಸಲು ಯೋಜಿಸಲಾಗಿದೆ.

ಕರಾವಳಿಗೆ ಉಪಯುಕ್ತ
ಎಸ್‌ಡಿಆರ್‌ಎಫ್‌ ಪಡೆಯನ್ನು ಮಂಗಳೂರಿನಲ್ಲಿ ಹೊಂದಿರುವುದರಿಂದ ನೆರೆಯಂತಹ ತುರ್ತು ಸನ್ನಿವೇಶಗಳಿಗೆ ಸ್ಪಂದಿಸುವುದು ಸುಲಭ. ಈಚೆಗಿನ ವರ್ಷಗಳಲ್ಲಿ ಪಶ್ಚಿಮ ಘಟ್ಟದ ವಿವಿಧ ಕಡೆ ಭೂ ಕುಸಿತ, ನೆರೆ ಹೆಚ್ಚಾಗುತ್ತಿದೆ. ಅಂಥಸನ್ನಿವೇಶಗಳಲ್ಲಿ ಸ್ಥಳಕ್ಕೆ ತೆರಳಿ ಅಪಾಯ ದಲ್ಲಿರುವ ಕುಟುಂಬಗಳ ರಕ್ಷಣೆ ಇತ್ಯಾದಿ ಸವಾಲಿನ ಕಾರ್ಯ ಎಸ್‌ಡಿಆರ್‌ಎಫ್‌ನಿಂದ ಪರಿಣಾಮಕಾರಿಯಾಗಿ ಸಾಧ್ಯ.

ರಾಜ್ಯ ವಿಪತ್ತು
ಸ್ಪಂದನ ಪಡೆಗೆ ಮಿಲಿಟರಿ ಯಿಂದ ಬಂದವರನ್ನೇ ನೇಮಿ ಸಲು ತೀರ್ಮಾನಿಸಲಾಗಿದೆ. ನಮ್ಮಲ್ಲಿ 39 ಮಂದಿಯ ತಂಡ ವಿದೆ, ಪೂರ್ಣ ಉಪಕರಣ ಇದೆ. ಬಡಗ ಎಕ್ಕಾರಿನಲ್ಲಿ ಪೂರ್ಣ ಪ್ರಮಾಣದ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.
– ತಿಪ್ಪೇಸ್ವಾಮಿ ಜಿ., ಪ್ರಭಾರ ಡೆಪ್ಯೂಟಿ ಕಮಾಂಡೆಂಟ್‌,
ಎಸ್‌ಡಿಆರ್‌ಎಫ್‌ ಮಂಗಳೂರು

- ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next