Advertisement

ಗೋವಾದ ಮಾಜಿ ರಣಜಿ ಕ್ರಿಕೇಟ್ ಪಟು ಪ್ರಸಾದ ಅಮೋಣಕರ್ ಇನ್ನಿಲ್ಲ

02:07 PM Jun 09, 2021 | Team Udayavani |

ಪಣಜಿ: ಗೋವಾದ ಮಾಜಿ ರಣಜಿ ಕ್ರಿಕೇಟ್ ಪಟು ಪ್ರಸಾದ ಅಮೋಣಕರ್(56) ಬುಧವಾರ ಕೋವಿಡ್ ಗೆ ಬಲಿಯಾಗಿದ್ದಾರೆ.

Advertisement

ಗೋವಾ ರಾಜಧಾನಿ ಪಣಜಿಯ ಶಂಕರವಾಡಿಯ ನಿವಾಸಿಯಾಗಿದ್ದ ಅವರು ರಾಜ್ಯಮಟ್ಟದಲ್ಲಿ ಮಡಗಾಂವ ಕ್ರಿಕೇಟ್ ಕ್ಲಬ್ ಮತ್ತು ಚೌಗುಲೆ ಸ್ಪೋಟ್ಸ್  ಕ್ಲಬ್‍ ನ ನೇತೃತ್ವ ವಹಿಸಿದ್ದರು. ಕ್ರಿಕೇಟ್ ಪಟು ಪ್ರಸಾದ ರವರು ಗೋವಾದ ವತಿಯಿಂದ 22 ರಣಜಿ ಕ್ರಿಕೇಟ್ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.

1988-89 ರಲ್ಲಿ ಕ್ರಿಕೇಟ್ ಸ್ಫರ್ಧೆಗೆ ಪಾದಾರ್ಪಣೆ ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಪ್ರಸಾದ ರವರಿಗೆ ಕೋವಿಡ್ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತ್ನಿ,ಪುತ್ರ ಮತ್ತು ಪರಿವಾರವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next