Advertisement
45 ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದುಕೊಂಡು ಬಂದಿದ್ದೇವೆ. ಆದರೆ, ಅಲ್ಲಿ ಹಿರಿಯರೆಂಬ ಯಾವುದೇ ಗೌರವ ಇಲ್ಲ. ಕುಟುಂಬ ರಾಜಕಾರಣದಲ್ಲೇ ಮುಳುಗಿದೆ. ಅವರ ಮಕ್ಕಳು,ಮೊಮ್ಮಕ್ಕಳಿಗೆ ಜೀತ ಮಾಡಲು ನಾವು ಸಿದ್ಧರಿಲ್ಲ. ಆದ್ದರಿಂದ ನಾನು, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷಬೆಟ್ಟೇಗೌಡರು, ತಾಪಂ ಮಾಜಿ ಅಧ್ಯಕ್ಷ ದಾಸೇಗೌಡಮೂವರು ಸಹ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ: ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 2018ರ ಬಳಿಕ ಏಜೆಂಟರುಗಳದ್ದೇ ಕಾರು ಬಾರು. ಲಂಚಕ್ಕೆ ಮಿತಿ ಇಲ್ಲದಂತಾಗಿದೆ. ರೈತರು, ಜನಸಾಮಾನ್ಯರ ಕೆಲಸಗಳು ಹಣ ಇಲ್ಲದೆ ಆಗುತ್ತಿಲ್ಲ. ಇಡೀಕಚೇರಿಯ ಕಂಬಗಳು ಹಣ ಕೇಳುವಂತಾಗಿದೆ.ಸರ್ವೆಯರ್‌ಗಳಿಗೆ ಎಕರೆ ಒಂದಕ್ಕೆ 25 ಸಾವಿರ ರೂ. ಫಿಕ್ಸ್ ಮಾಡಲಾಗಿದೆ. ಇದರಿಂದ ಎಕರೆಗೆ 60 ಸಾವಿರರೂ.ನಿಂದ 1 ಲಕ್ಷದವರೆಗೂ ವ್ಯಾಪಾರ ನಡೆಯುತ್ತಿದೆ.ಹಣ ಕೊಡದಿದ್ದಕ್ಕೆ ನನ್ನ ಅರ್ಜಿಯನ್ನೇ ವಿಳಂಬಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈಬಗ್ಗೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಜಿಲ್ಲೆಗೆ ಬಂದಿದ್ದ ಯೋಜನೆ ಹಾಸನಕ್ಕೆ ಶಿಫ್ಟ್: ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರ ಮಾತಿಗೆ ಏಳುಮಂದಿ ಶಾಸಕರನ್ನು ಗೆಲ್ಲಿಸಲಾಯಿತು. ಆದರೆ,ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು.ಮನ್‌ಮುಲ್ ಮಂಜೂರಾಗಿದ್ದ ಪಶು ಆಹಾರಉತ್ಪಾದನಾ ಘಟಕ, ಹಾಲಿನ ಪೌಡರ್ ಘಟಕವನ್ನು ಹಾಸನಕ್ಕೆ ತೆಗೆದುಕೊಂಡು ಹೋಗಲಾಯಿತು. ಹಾಸನಕ್ಕೆ ಐಐಟಿ, ಏರ್‌ಪೋರ್ಟ್ ಯೋಜನೆಕೊಂಡೊಯ್ದು ಮಂಡ್ಯ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ್ದಾರೆ. ಇರುವ ಏಕೈಕ ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲಿಲ್ಲ ಎಂದುಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣೇಗೌಡ, ರಾಜೇಗೌಡ, ಬಾಲಕೃಷ್ಣ, ಸತ್ಯ, ಜಯಣ್ಣ, ಆನಂದಣ್ಣ ಹಾಜರಿದ್ದರು.
ಮತಕ್ಕಾಗಿ ಕಾರ್ಯಕರ್ತರ ಬಳಕೆ : ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸದ ಜೆಡಿಎಸ್ ಪಕ್ಷಕೇವಲ ಜಿಲ್ಲೆಯ ಜನರನ್ನು ಮತಕ್ಕಾಗಿ ಹಾಗೂಪಕ್ಷದ ಕಾರ್ಯಕರ್ತರನ್ನು ದುಡಿಯಲುಇಟ್ಟುಕೊಂಡಿದ್ದಾರೆ. ಆದ್ದರಿಂದ ಬೇಸತ್ತು ನಾವೆಲ್ಲರೂ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇವೆ. ಇನ್ನೂಗ್ರಾಪಂ, ತಾಪಂ, ಜಿಪಂ ಮಾಜಿ ಸದಸ್ಯರು ಸಹ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಮನ್ ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ತಿಳಿಸಿದರು.