Advertisement

ಮಾಜಿ, ಹಾಲಿ ಶಾಸಕರಿಗೆ ತಕ್ಕಪಾಠ: ಕೆ.ಎಚ್‌.ಮುನಿಯಪ್ಪ

09:48 PM Apr 01, 2019 | Lakshmi GovindaRaju |

ಮುಳಬಾಗಿಲು: ಕೊತ್ತೂರು ಮಂಜುನಾಥ್‌ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ತಮ್ಮ ಪಾತ್ರವೇನು ಇಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಸ್ಪಷ್ಟಪಡಿಸಿದರು.

Advertisement

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಂಗ್ರೆಸ್‌ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಳಬಾಗಿಲಿನ ಮಾಜಿ ಮತ್ತು ಹಾಲಿ ಶಾಸಕರು ಕಾಂಗ್ರೆಸ್‌ ನೆರವಿನಿಂದ ಗೆದ್ದು, ಲೋಕಸಭಾ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಪರ ಮತ ಕೇಳಲು ಬರುತ್ತಿದ್ದಾರೆ.

ನಿಮ್ಮ ಮನೆಗಳಿಗೆ ಈ ಇಬ್ಬರು ಮತ ಕೇಳಲು ಬಂದಾಗ ಯಾರಿಗೆ ಮತ ಹಾಕಬೇಕೆಂದು ಅವರನ್ನು ಪ್ರಶ್ನಿಸಿ, ತಪ್ಪು ದಾರಿಯಲ್ಲಿ ನಡೆಯುತ್ತಿರುವ ಇವರಿಬ್ಬರಿಗೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಿ ಎಂದು ಹೇಳಿದರು.

ದೇವರು ಒಳ್ಳೆಯದು ಮಾಡಲಿ: ಕಳೆದ ವಿಧಾನಸಭೆ ಚುನಾವಣೆ ವೇಳೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಜಾತಿ ಪ್ರಮಾಣ ಪತ್ರದ ವ್ಯಾಜ್ಯ ಕೋರ್ಟಿನಲ್ಲಿತ್ತು. ಈ ವಿಚಾರವಾಗಿ ನಾಮಪತ್ರ ಸಲ್ಲಿಸುವ ವೇಳೆ ಮತ್ತೂಬ್ಬರ ಹೆಸರು ಸೂಚಿಸಲು ಹೇಳಿದೆ. ಆದರೆ, ನಮ್ಮ ಮಾತಿಗೆ ಬೆಲೆ ನೀಡದ ಪರಿಣಾಮ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ, ಚಿಹ್ನೆ ಇಲ್ಲದೆ ಹೋಯಿತು.

ಕೊತ್ತೂರು ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ತಮ್ಮ ಪಾತ್ರವೇನು ಇಲ್ಲ, ಕಾನೂನು ಎಲ್ಲಾ ಕೆಲಸವನ್ನು ಮಾಡುತ್ತಿದೆ. ಅದಕ್ಕೆ ತಾವು ಹೊಣೆಯೇ ಎಂದು ಪ್ರಶ್ನಿಸಿದರು. ಪ್ರಸ್ತುತ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿಕೊಂಡು ಸೋಲಿಸಲು ಪಣತೊಟ್ಟಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.

ಸರಿ ದಾರಿ ತೋರಿದ್ದು ತಪ್ಪೇ:
ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿ ಬೆಳೆಸಲು ಶ್ರಮ ಹಾಕಿದೆ. ಕೊತ್ತೂರು ಸಹ ಕ್ಷೇತ್ರದ ಆರು ಜಿಪಂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷ ಸಂಘಟನೆ ಮಾಡಿದರು. ಅದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಆದರೆ, ದಾರಿ ತಪ್ಪಿ ಹೋಗುವಾಗ ಸರಿ ದಾರಿಯಲ್ಲಿ ಹೋಗಿ ಎಂದು ಹೇಳುವುದು ತಪ್ಪೇ ಎಂದು ಮಾಜಿ ಶಾಸಕ ಕೊತ್ತೂರು ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

Advertisement

ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಎನ್‌.ಎಸ್‌.ಬಿಸೇಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಾರೆಡ್ಡಿ, ಆವಣಿ ಬ್ಲಾಕ್‌ ಅಧ್ಯಕ್ಷ ಆನಂದರೆಡ್ಡಿ, ಮಾಜಿ ಅಧ್ಯಕ್ಷ ಜಿ.ರಾಮಲಿಂಗರೆಡ್ಡಿ, ವಸಂತಕವಿತಾ, ಜಿಪಂ ಮಾಜಿ ಅಧ್ಯಕ್ಷ ಜನಘಟ್ಟ ವೆಂಕಟಮುನಿಯಪ್ಪ, ದಳಸನೂರು ಗೋಪಾಲ್‌ಕೃಷ್ಣ, ನಿವೃತ್ತ ಡಿ.ಸಿ. ಜಾಮೀಲ್‌ಪಾಷಾ, ಕೆ.ವಿ.ರಾಮಪ್ರಸಾದ್‌,

ಜಿಪಂ ಮಾಜಿ ಸದಸ್ಯ ಬಿ.ಕೆ.ವೆಂಕಟನಾರಾಯಣ್‌, ಕಾಡೇನಹಳ್ಳಿ ಚೌಡೇಗೌಡ, ಜಿಲ್ಲಾ ಎಸ್‌ಸಿ ವಿಭಾಗದ ಅಧ್ಯಕ್ಷ ಜಯದೇವ್‌, ಜಿ.ಆರ್‌.ಮನೋಹರ್‌, ರಾಮಚಂದ್ರಪ್ಪ, ಯಾಮಣ್ಣ, ಕಾರ್ಗಿಲ್‌ ವೆಂಕಟೇಶ್‌, ನಗರಸಭೆ ಸದಸ್ಯರಾದ ಅಕ್ಮಲ್‌ಬೇಗ್‌, ಕ್ಯಾಸೆಟ್‌ ಬಾಬು, ಕೀಲುಹೊಳಲಿ ಸತೀಶ್‌, ಕಸವು ವೆಂಕಟರಾಮಪ್ಪ ಗೊಡಗು ನಾರಾಯಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next