Advertisement

ಮಾಜಿ ಪ್ರಧಾನಿ ಡಾ|ಮನಮೋಹನ್‌ ಸಿಂಗ್ ಡಿಸ್ಚಾರ್ಜ್‌

09:17 AM May 13, 2020 | mahesh |

ಹೊಸದಿಲ್ಲಿ: ಎದೆನೋವು ಹಾಗೂ ಬಳಲಿಕೆಯಿಂದಾಗಿ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಮಂಗಳವಾರ ಡಿಸ್ಚಾರ್ಜ್‌ ಆಗಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಏಮ್ಸ್ ಮೂಲಗಳು ತಿಳಿಸಿವೆ. ಹೊಸ ಔಷಧವೊಂದನ್ನು ಸೇವಿಸಿದ ಪರಿಣಾಮ ಅದು ರಿಯಾಕ್ಷನ್‌ ಆಗಿ, ಅವರಲ್ಲಿ ಎದೆನೋವು ಮತ್ತು ಬಳಲಿಕೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಜತೆಗೆ ಅವರಲ್ಲಿ ಜ್ವರವೂ ಕಾಣಿಸಿ ಕೊಂಡಿತ್ತು. ಹೀಗಾಗಿ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗಿದ್ದು, ವರದಿ ನೆಗೆಟಿವ್‌ ಎಂದು ಬಂದಿತ್ತು. ಪ್ರಸ್ತುತ ಅವರು ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next