Advertisement

ಹಠಾತ್ ಹೃದಯ ಸ್ತಂಭನ: ಪಾಕಿಸ್ಥಾನದ ಮಾಜಿ ಅಂಪೈರ್ ಅಸದ್ ರವುಫ್ ನಿಧನ

09:15 AM Sep 15, 2022 | Team Udayavani |

ಲಾಹೋರ್: ಹಠಾತ್ ಹೃದಯ ಸ್ತಂಭನದ ಕಾರಣದಿಂದ ಪಾಕಿಸ್ಥಾನದ ಮಾಜಿ ಅಂಪೈರ್ ಅಸದ್ ರವುಫ್ ನಿಧನ ಹೊಂದಿದ್ದಾರೆ. ಗುರುವಾರ ಬೆಳಗ್ಗೆ 66 ವರ್ಷದ ರವುಫ್ ಅವರು ಲಾಹೋರ್ ನಲ್ಲಿ ಕೊನೆಯುಸಿರೆಳೆದರು.

Advertisement

ಕ್ರಿಕೆಟ್ ನಿಂದ ದೂರವಾದ ಬಳಿಕ ರವುಫ್ ಅವರು ಲಾಹೋರ್ ನ ಲಾಂಡಾ ಬಜಾರ್‌ ನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಅಂಗಡಿಯನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ರವುಫ್ ಸಹೋದರ ತಾಹಿರ್ ಹೇಳಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.

ಐಸಿಸಿ ಎಲೈಟ್ ಅಂಪೈರ್ ಗಳ ಪಟ್ಟಿಯಲ್ಲಿ ಅಲೀಮ್ ದಾರ್ ಅವರೊಂದಿಗೆ ಮಿಂಚಿದ್ದ ಅಸದ್ ರವುಫ್ ಒಂದು ಕಾಲದಲ್ಲಿ ಪಾಕಿಸ್ಥಾನದ ಪ್ರಮುಖ ಅಂಪೈರ್ ಆಗಿದ್ದರು.

ರವುಫ್ ಅವರು 1998 ರಲ್ಲಿ ತಮ್ಮ ಅಂಪೈರಿಂಗ್ ಪಯಣವನ್ನು ಪ್ರಾರಂಭಿಸಿದರು. 2000 ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅಂಪೈರಿಂಗ್ ಮಾಡಿದರು. ನಾಲ್ಕು ವರ್ಷಗಳ ನಂತರ, 2004 ರಲ್ಲಿ ರವುಫ್ ಅವರನ್ನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂಪೈರ್‌ಗಳ ಸಮಿತಿಗೆ ಸೇರಿಸಲಾಯಿತು.

2006 ರಲ್ಲಿ, ರೌಫ್ ಅವರನ್ನು ಐಸಿಸಿ ಯ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ ಗಳಿಗೆ ಸೇರಿಸಲಾಯಿತು. ಅಸದ್ ರವುಫ್ ಅವರು 47 ಟೆಸ್ಟ್, 98 ಏಕದಿನ ಮತ್ತು 23 ಟಿ20 ಅಂತಾರಾಷ್ಟ್ರೀಯ ಗಳಲ್ಲಿ ಅಂಪೈರ್‌ ಗಳಾಗಿ ಕಾರ್ಯನಿರ್ವಹಿಸಿದರು. ಐಪಿಎಲ್ ನಲ್ಲೂ ಅವರು ಕಾರ್ಯನಿರ್ವಹಿಸಿದ್ದರು. ಆದರೆ 2013ರಲ್ಲಿ ಅಸದ್ ರವುಫ್ ವಿರುದ್ದ ಫಿಕ್ಸಿಂಗ್ ಆರೋಪ ಕೇಳಿಬಂದ ಬಳಿಕ ಅವರು ಕ್ರಿಕೆಟ್ ನಿಂದ ದೂರಾವಾಗಿದ್ದರು.

Advertisement

ಉತ್ತಮ ಅಂಪೈರ್ ಆಗಿದ್ದಲ್ಲದೆ, ರವುಫ್ ಪಾಕಿಸ್ತಾನದಲ್ಲಿ ಹೆಸರಾಂತ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು. 71 ಪ್ರಥಮ ದರ್ಜೆ ಮತ್ತು 40 ಲಿಸ್ಟ್ ಎ ಪಂದ್ಯಗಳಲ್ಲಿ, ಮೂರು ಶತಕ ಮತ್ತು 26 ಅರ್ಧ ಶತಕಗಳ ಸಹಾಯದಿಂದ ಕ್ರಮವಾಗಿ 3423 ಮತ್ತು 611 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next