Advertisement

ಪಾಕ್‌ ಮಾಜಿ ಪ್ರಧಾನ ಮಂತ್ರಿ ಅಬ್ಬಾಸಿ‌ಗೆ ಸೋಂಕು

06:11 PM Jun 09, 2020 | Hari Prasad |

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಪ್ರಧಾನಿ ಶಾಹಿದ್‌ ಖಾನ್‌ ಅಬ್ಬಾಸಿ‌ ಮತ್ತು ರೈಲ್ವೇ ಸಚಿವ ಶೇಖ್‌ ರಶೀದ್‌ಗೆ ಸೋಂಕು ತಗುಲಿರುವುದು ದೃಢವಾಗಿದೆ.

Advertisement

ಪಾಕಿಸ್ಥಾನ ಮುಸ್ಲಿಂ ಲೀಗ್‌-ನವಾಜ್‌ ಪಕ್ಷದ ಅಧ್ಯಕ್ಷ ಶೆಭಾಝ್ ಖಾನ್‌ ಅವರು ಅಬ್ಬಾಸಿ‌ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಸೋಂಕು ದೃಢಪಟ್ಟ ಬಳಿಕ ಅಬ್ಟಾಸ್‌ ಅವರು ಕ್ವಾರಂಟೈನ್‌ನಲ್ಲಿದ್ದಾರೆ. ರೈಲ್ವೆ ಸಚಿವ ಶೇಖ್‌ ರಶೀದ್‌ಗೆ ಸೋಂಕು ತಗಲಿರುವ ಬಗ್ಗೆ ಅವರ ಕಚೇರಿಯೇ ಖಚಿತಪಡಿಸಿದೆ.

ಅವರು ಕೂಡ ಮುಂದಿನ ಎರಡು ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಪಾಕಿಸ್ಥಾನದಲ್ಲಿ ಇದುವರೆಗೆ ನಾಲ್ವರು ಜನಪ್ರತಿನಿಧಿಗಳು ವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next