ಪಿರಿಯಾಪಟ್ಟಣ: ಶಾಸಕ ಕೆ.ಮಹದೇವ್ ಹಾಗೂ ಸಂಸದ ಪ್ರತಾಪ್ ಸಿಂಹರವರು ಒಳ ಒಪ್ಪಂದ ಮಾಡಿಕೊಂಡು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ಆರೋಪಿಸಿದರು.
ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಭಾನುವಾರ ನಡೆದ ಪ್ರಜಾಪ್ರತಿನಿಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಿಗೆ ಪರಮಾಧಿಕಾರ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಕೊಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಸಿದರು. ಆದರೆ ಸಂಸದ ಪ್ರತಾಪ್ ಸಿಂಹ ನರೇಗಾ ಯೋಜನೆಗಳಿಗೆ ಚಾಲನೆ ನೀಡುವುದೇ ದೊಡ್ಡ ಸಾಧನೆ ಎಂದು ಭಾವಿಸಿ ಜನರ ಕಣ್ಣಿಗೆ ಬಟ್ಟೆಕಟ್ಟಲು ಹವಣಿಸುತ್ತ ಈ ಯೋಜನೆಯನ್ನು ನಾನೇ ಜಾರಿಗೊಳಿಸಿದ್ದು ಎಂಬಂತೆ ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ತಾಲ್ಲೂಕಿನ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತು ಕೆಲಸ ನಡೆಯುತ್ತಿತ್ತು ಇದರ ನಡುವೆ ಸರ್ಕಾರ ಬದಲಾದ ನಂತರ ಶಾಸಕ ಕೆ.ಮಹದೇವ್ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಸ್ವಲ್ಪ ಅನುದಾನ ತಂದದ್ದು ಬಿಟ್ಟರೆ ಬಿಜೆಪಿ ಸರ್ಕಾರದಲ್ಲಿ ಬಿಡಿಗಾಸು ತರಲು ಸಾಧ್ಯವಾಗಿಲ್ಲ ಎಂದರು.
ಹಣವನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ಮನರೇಗಾ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಪಂಚಾಯಿತಿ ಜನಪ್ರತಿನಿಧಿಗಳಿಗೆ ಮೀಸಲಾದ ಯೋಜನೆಗಳಿಗೆ ಗುದ್ದಲಿಪೂಜೆ ಮಾಡುವ ನಾಟಕ ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ಅಧಿಕಾರವನ್ನು ಕಬಳಿಸಿ ಲೂಟಿ ಮಾಡುತ್ತಿದ್ದಾರೆ. ನಾನು ಇಲ್ಲಿಯ ವರೆಗೂ ಏನು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದು ದಾಖಲೆ ಸಮೇತ ನೀಡುತ್ತೇನೆ ಗ್ರಾಪಂ ಅಧ್ಯಕ್ಷರು ಚಾಲನೆ ನೀಡಬೇಕಾದ ಕಾಮಗಾರಿಗಳಿಗೆ ಅಧಿಕಾರಿಗಳಿಂದ ಒತ್ತಡಹಾಕಿಸಿ ಚಾಲನೆ ನೀಡುವುದೇ ದೊಡ್ಡ ಕೆಲಸವಲ್ಲ ಇವರು ಯಾವುದಾದರೂ ಶಾಸ್ವತವಾದ ಯೋಜನೆಯನ್ನು ಜಾರಿಗೆ ತಂದು ತಮ್ಮ ತಾಲ್ಲೂಕಿಗೆ ಕೊಡುಗೆ ನೀಡಿದ್ದರೆ ಬಹಿರಂಗ ಪಡಿಸುವ ಮೂಲಕ ತಮ್ಮ ಪೌರುಷವನ್ನು ತೋರಿಸಲಿ ಎಂದು ಸವಾಲೆಸದರು.
ಮಾಜಿ ತಾ.ಪಂ.ಅಧ್ಯಕ್ಷ ಐಲಾಪುರ ರಾಮು ಮಾತನಾಡಿ ದೇಶದಲ್ಲಿ ದಲಿತ,ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಸಾಮಾಜಿಕ ನ್ಯಾಯದಡಿ ಕೊಂಡೊಯ್ಯುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ, , ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಪ್ರತಿಯೊಂದು ಸಮಾಜಕ್ಕೂ ಸಮಾನ ಅನುದಾನ ಮತ್ತು ಅವಕಾಶ ನೀಡುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಲಾಗಿತ್ತು. ಆದರೆ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕೋಮುಗಲಭೆ, ಮಹಿಳೆಯರ ಮೇಲೆನ ಅತ್ಯಚಾರ, ಉದ್ಯೋಗ ಕೇಳುವ ನಿರುದ್ಯೋಗಿ ಯುವಕರ ಮೇಲೆ ಎಐಆರ್ ಪ್ರಕರಣ ದಾಖಲಿಸುವುದು ಮುಷ್ಕರ ಮಾಡುವ ರೈತರನ್ನು ಕೊಲೆ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಕಳೆದ 10 ತಿಂಗಳಿಂದ ರೈತರು ಸತ್ಯಗ್ರಹ ನಡೆಸಿ ಈಗಾಗಲೇ 75 ರೈತರು ಅಸುನೀಗಿದ್ದರೂ ದಾವಿಸದ ಪ್ರಧಾನಿ ಮೋದಿ ರೈತ ವಿರೋಧಿ ನೀತಿಯನ್ನು ಅನುಸರಿಸಿ ಜನಸಾಮಾನ್ಯರನ್ನು ಬೀದಿಗೆ ಶ್ರೀಮಂತರ ಕಪಿಮುಷ್ಠಿಯತ್ತ ದೇಶವನ್ನ ಕೊಂಡೋಯ್ಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಎಂ.ಎಸ್.ಮೀನಾಕ್ಷಿಮ್ಮ, ಉಪಾಧ್ಯಕ್ಷ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್‌ಜಾನ್‌ಬಾಬು, ಮಹಿಳಾ ಘಟಕದ ಅಧ್ಯಕ್ಷೆ ಮುತ್ತುರಾಣಿ, ಪುರಸಭಾ ಮಾಜಿ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಮುಖಂಡರಾದ ಅನಿಲ್ ಕುಮಾರ್, ವಿಜಯಕುಮಾರ್, ಕಾಮರಾಜು, ಸೀಗೂರು ವಿಜಯಕುಮಾರ್, ಹಿಟ್ನಳ್ಳಿ ಪರಮೇಶ್, ಪಿ.ಮಹದೇವ್, ಲೋಕೇಶ್, ಹೆಚ್.ಬಿ.ಶಿವರುದ್ರ, ಅಮೃತೇಶ್, ಜಯಶಂಕರ್, ಅಣ್ಣಯ್ಯ, ಕುಮಾರ್, ಮುರುಳೀಧರ್, ಜೆ.ಮೋಹನ್, ಪದ್ಮಲತಾ, ಮಹದೇಂದ್ರಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.