Advertisement

ಸಂಸದೆಯ ಬೆನ್ನಲ್ಲೇ ರಣಾಂಗಣಕ್ಕೆ ಜಿಗಿದ ಮಾಜಿ ಬ್ಯೂಟಿಕ್ವೀನ್‌!

09:17 PM Feb 27, 2022 | Team Udayavani |

ಉಕ್ರೇನ್‌ನಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರೂ ರಷ್ಯಾ ಆಕ್ರಮಣದಿಂದ ತಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಶಸ್ತ್ರ ಕೈಗೆತ್ತಿಕೊಂಡಿದ್ದಾರೆ.

Advertisement

ಸಂಸದೆಯೊಬ್ಬರು ರೈಫ‌ಲ್‌ ಹಿಡಿದು ಯುದ್ಧಕ್ಕೆ ಸಜ್ಜಾಗಿದ್ದ ಫೋಟೋ ವೈರಲ್‌ ಆದ ಬೆನ್ನಲ್ಲೇ ಈಗ ಉಕ್ರೇನ್‌ನ ಮಾಜಿ ಬ್ಯೂಟಿಕ್ವೀನ್‌ ಕೂಡ ರಣಾಂಗಣಕ್ಕೆ ಧುಮುಕಿದ್ದಾರೆ.

2015ರ ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಷನಲ್‌ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್‌ ಅನ್ನು ಪ್ರತಿನಿಧಿಸಿದ್ದ ಅನಸ್ತೇಸಿಯಾ ಲೆನ್ನಾ ಈಗ ಗನ್‌ ಹಿಡಿದಿದ್ದಾರೆ. “ಆಕ್ರಮಣದ ಉದ್ದೇಶದಿಂದ ಉಕ್ರೇನ್‌ ಗಡಿಯಲ್ಲಿ ದಾಟಿ ಬಂದ ಪ್ರತಿಯೊಬ್ಬರನ್ನೂ ಕೊಂದುಹಾಕುತ್ತೇನೆ’ ಎಂದೂ ಆವೇಶಭರಿತರಾಗಿ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next