Advertisement
ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹ ಕಾಯಿಲೆ ಹೆಚ್ಚಾಗಿದ್ದರಿಂದ ಎರಡು ದಿನಗಳ ಹಿಂದೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದರು. ಪತ್ನಿ, ಪುತ್ರ, ಸಂಬಂಧಿಕರು, ಆಪ್ತರು, ರಾಜಕೀಯ ಸ್ನೇಹಿತರು, ಬೆಂಬಲಿಗರನ್ನು ಖಮರುಲ್ ಇಸ್ಲಾಂ ಅಗಲಿದ್ದಾರೆ. ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಆಪ್ತರು, ಸಂಬಂಧಿಕರು ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದರು. ಬಳಿಕ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಮಧ್ಯಾಹ್ನ 3.30ಕ್ಕೆ ಆರ್.ಟಿ. ನಗರದ ನಿವಾಸಕ್ಕೆ ತರಲಾಯಿತು.
Related Articles
Advertisement
“ಅಸಿರಿಯಾ’ ಕಾಯಿಲೆ ಇತ್ತುಖಮರುಲ್ ಇಸ್ಲಾಂ ಅಪರೂಪದ ನರಸಂಬಂಧಿ “ಅಸಿರಿಯಾ’ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಯಾವ ಚಿಕಿತ್ಸೆಗೂ ಸ್ಪಂದಿಸದ ಮಟ್ಟಕ್ಕೆ ಹೋಗುವ ಕಾಯಿಲೆ. ಈ ಕಾಯಿಲೆ ಇರುವುದು ಪತ್ತೆಯಾದ ತಕ್ಷಣ 4 ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಲಾಗುತ್ತಿತ್ತು. ಅಲ್ಲದೇ ಬಹುಅಂಗಾಂಗ
ವೈಫಲ್ಯದಿಂದಲೂ ಅವರು ಬಳಲುತ್ತಿದ್ದರು. ಮಧುಮೇಹ ಹೆಚ್ಚಾಗಿ ಕಾಲಿನ ಗಾಯ ಸಹ ಇತ್ತಿ ಚಿಗೆ ತುಂಬಾ ಉಲ್ಬಣಗೊಂಡಿತ್ತು ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಲಬುರಗಿಯಲ್ಲಿಂದು ಅಂತ್ಯಕ್ರಿಯೆ
ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ ಸೆ. 19ರಂದು ರಾತ್ರಿ 10ಗಂಟೆ ಸುಮಾರಿಗೆ ನಗರದ ಜಿಲ್ಲಾ ನ್ಯಾಯಾಲಯ ರಸ್ತೆಯ ಖಬರಸ್ತಾನ್ ರೋಜಾ-ಇ ಖಲಾಂದರ್ ಖಾನ್‌ದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಬೆಂಗಳೂರಿನಿಂದ ಬೆಳಗ್ಗೆ 7ರಿಂದ 8:30ರ ಸುಮಾರಿಗೆ ಪಾರ್ಥೀವ ಶರೀರ ನಗರಕ್ಕೆ ಆಗಮಿಸಿದ ನಂತರ ಕೆಲ ಗಂಟೆಗಳ ಕಾಲ ಸ್ಟೇಷನ್ ಬಜಾರ್‌ದಲ್ಲಿರುವ ಅವರ ಮನೆಯಲ್ಲಿಟ್ಟು ಧಾರ್ಮಿಕ ವಿಧಿ ವಿಧಾನ ಕಾರ್ಯಗಳನ್ನು ಪೂರ್ಣಗೊಳಿಸಿತದ ನಂತರ ಮೆರವಣಿಗೆ ಮೂಲಕ ಎಂಎಸ್‌ಕೆ ಮಿಲ್ ಜಿಲಾನಾಬಾದ್, ಮಿಸ್ಬಾ ನಗರ, ಆಳಂದ ಚೆಕ್‌ಪೋಸ್ಟ್, ತಾಜನಗರ, ಹುಮನಾಬಾದ ಸರ್ಕಲ್, ಮಿಲ್ಲತ್ ನಗರದಿಂದ ವರ್ತುಲ ರಸ್ತೆಯಲ್ಲಿರುವ ಕೆಸಿಟಿ ಎಂಜಿನಿಯರಿಂಗ್ ಕಾಲೇಜಿಗೆ ತೆಗೆದುಕೊಂಡು ಹೋಗಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ಕ್ಕೆ ಕೆಸಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಕಲ ಸರ್ಕಾರಿ ಗೌರವಗಳನ್ನು ನೆರವೇರಿಸಿದ ನಂತರ ಪಾರ್ಥಿವ ಶರೀರವನ್ನು ಪಾದಯಾತ್ರೆ ಮೂಲಕ ಮಹ್ಮದ ರಫಿ ಚೌಕ್, ಬಿಬಿ ರಾಜಾ ಕಾಲೇಜು, ರೋಜಾ ಪೊಲೀಸ್ ಠಾಣೆ, ಫರಾನಾ ಕಾಲೇಜು, ಮುಸ್ಲಿಂ ಚೌಕ್, ಗಂಜ್, ಹುಮನಾಬಾದ ಬೇಸ್, ಸೂಪರ್ ಮಾರ್ಕೆಟ್, ಜಗತ್ ಸರ್ಕಲ್, ಸರ್ದಾರ ವಲ್ಲಭಭಾಯಿ ಪಟೇಲ ವೃತ್ತ, ನ್ಯಾಯಾಲಯ ರಸ್ತೆ ಖಬರಸ್ತಾನ್ ರೋಜಾ-ಇ ಖಲಾಂದರ್ ಖಾನ್‌ಗೆ ತೆರಳಿ ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರುವುದು. ಸಾರ್ವಜನಿಕ ದರ್ಶನದ ವ್ಯವಸ್ಥೆ ಹಾಗೂ
ಅಂತ್ಯಕ್ರಿಯೆ ಕುರಿತಾಗಿ ಜಿಲ್ಲಾಧಿಕಾರಿ ಎಂ. ಕಟೇಶಕುಮಾರ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಇನ್ನೂ ಸಮಯ ಅಂತಿಮಗೊಂಡಿಲ್ಲ ಎಂದರು. ಧರಂ, ಖರ್ಗೆ ಜತೆ ಅವಿನಾಭಾವ ಸಂಬಂಧ
ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಮತ್ತು ಖಮರುಲ್ ಇಸ್ಲಾಂ…ರಾಜ್ಯ ರಾಜಕಾರಣ ದಲ್ಲಿ ಕಲಬುರಗಿ ಜಿಲ್ಲೆ ಪ್ರಸ್ತಾಪವಾಗುತ್ತಿ ದ್ದಂತೆ ಕೇಳಿಬರುತ್ತಿದ್ದ ಪ್ರಮುಖ 3 ಹೆಸರು ಗಳಿವು. ಅಷ್ಟರ ಮಟ್ಟಿಗೆ ಖರ್ಗೆ, ಧರಂ ಮತ್ತು ಖಮರುಲ್ ಇಸ್ಲಾಂ ಕಲಬುರಗಿ ಜಿಲ್ಲೆ ಮತ್ತು ರಾಜ್ಯದಲ್ಲಿ ತಮ್ಮ ಪ್ರಭಾವ ಹೊಂದಿದ್ದರು. ಈ ಪೈಕಿ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆಯವರಾದರೆ, ಧರಂಸಿಂಗ್ ಮಧ್ಯದವರು. ಖಮರುಲ್ ಕಿರಿಯ ಸಹೋದರ ಎಂದೇ ಕಾಂಗ್ರೆಸ್‌ನಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ಖರ್ಗೆ 10 ಬಾರಿ, ಧರಂಸಿಂಗ್ 7 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದರೆ, ಖಮರುಲ್ 6 ಬಾರಿ ವಿಧಾನ ಸಭೆ ಪ್ರವೇಶಿಸಿದ್ದರು. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಈ ಮೂವರೂ ಸಚಿವರಾಗಿದ್ದರು. ಖರ್ಗೆ ಅವರಿಗೆ ಗೃಹ ಮತ್ತು ಸಣ್ಣ ನೀರಾವರಿ, ಧರಂ ಸಿಂಗ್ ಅವರಿಗೆ ಲೋಕೋಪಯೋಗಿ ಮತ್ತು ಖಮರುಲ್ ಇಸ್ಲಾಂ ಕಾರ್ಮಿಕ ಖಾತೆ ಹೊಂದಿದ್ದರು. ಆ ವೇಳೆ ಕೇವಲ ಒಂದು ಜಿಲ್ಲೆಯಿಂದ ಮೂವರನ್ನು ಸಚಿವರನ್ನಾಗಿ ಮಾಡಿ ದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತಾದರೂ ಮೂವರ ಹಿರಿತನ ಆ ಆಕ್ಷೇಪವನ್ನು ನುಂಗಿಹಾಕಿತ್ತು. ಸಿಎಂ ಸಭೆ ತಾತ್ಕಾಲಿಕ ಮುಂದೂಡಿಕೆ
ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಶಾಲಾಡಳಿತ ಮಂಡಳಿ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ನೀಡುವಂತೆ ವಿಧಾನ ಪರಿಷತ್ ಸದಸ್ಯರು ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯ ನಿಮಿತ್ತ ಸೆ.19ರಂದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಡೆಯಬೇಕಿದ್ದ ಸಭೆ ತಾತ್ಕಾಲಿಕವಾಗಿ ರದ್ದಾಗಿದೆ. ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ನಿಧನದಿಂದ ಸಿಎಂ ಸಿದ್ದರಾಮಯ್ಯ ಅವರ ಸೆ.19ರ ಎಲ್ಲಾ ಕಾರ್ಯಕ್ರಮ ರದ್ದಾಗಿರುವುದರಿಂದ ಈ ಸಭೆಯನ್ನು ಮುಂದೂಡಲಾಗಿದೆ.