Advertisement

ಮಾತು ತಪ್ಪಿದ ಸಿಎಂ ಬಿಎಸ್‌ವೈ

06:51 PM Jan 04, 2021 | Team Udayavani |

ಚಿತ್ರದುರ್ಗ: ರಾಜ್ಯದ ರೈಲ್ವೆ ಯೋಜನೆಗಳಿಗೆ ಭೂಮಿ ಹಾಗೂ ಅವುಗಳಿಗೆ ತಗುಲುವ ವೆಚ್ಚದಲ್ಲಿ ಅರ್ಧದಷ್ಟು ಭರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತು ತಪ್ಪಿದ್ದಾರೆ ಎಂದು ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

Advertisement

ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ-ಹರಿಹರ, ದಾವಣಗೆರೆ -ಚಿತ್ರದುರ್ಗ-ತುಮಕೂರು, ಕಡಪಾದಿಂದ ಬಂಗಾರಪೇಟೆ, ಚಿಂತಾಮಣಿಯಿಂದ ಮದನಪಲ್ಲಿ, ಬೀದರ್‌ನಿಂದ ಗುಲ್ಬರ್ಗ, ತುಮಕೂರು-ರಾಯದುರ್ಗ ರೈಲ್ವೆ ಸಂಪರ್ಕಕ್ಕೆಒತ್ತು ನೀಡಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಗಲುವ ವೆಚ್ಚದಲ್ಲಿ ಅರ್ಧದಷ್ಟು ಭರಿಸುವ ಭರವಸೆ ನೀಡಿದ್ದರು. 2010-11,2011-12 ನೇ ಸಾಲಿನಲ್ಲಿ ನೀಡಿರುವ ಎಲ್ಲಾಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಲಿ ಎಂದು ಒತ್ತಾಯಿಸಿದರು.

ರೈಲ್ವೆ ಯೋಜನೆಗಳು ಜಾರಿಯಾದರೆ ರೈತ ತಾನು ಬೆಳೆದ ಬೆಳೆಯನ್ನುಬೇರೆ ಊರುಗಳಿಗೆ ಸಾಗಿಸಲು ನೆರವಾಗುತ್ತದೆ.ಇದರಿಂದ ಪ್ರಯಾಣದ ದರ ಹಾಗೂ ಸಮಯ ಉಳಿಯುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ರೈತರು, ಕಾರ್ಮಿಕರ ವಿರೋಧಿಯಾಗಿರುವ ಕಠಿಣ ಕಾಯ್ದೆ ತಂದಿರುವುದುಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಕೆ.ಎಚ್‌.ಮುನಿಯಪ್ಪ, ಪಂಜಾಬ್‌, ಹರಿಯಾಣದ ರೈತರುದೆಹಲಿಯಲ್ಲಿ ಮೈಕೊರೆಯುವ ಚಳಿಯನ್ನು ಲೆಕ್ಕಿಸದೆಹೋರಾಟದಲ್ಲಿ ತೊಡಗಿದ್ದಾರೆ. ಉದ್ಯಮಿಗಳು, ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ ಲಕ್ಷಾಂತರ ಕೋಟಿ ರೂ. ಸಾಲ ಮನ್ನ ಮಾಡಿರುವಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಏಕೆ ಆಗುತ್ತಿಲ್ಲ ಎಂದರು.

ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ರೈಲ್ವೆ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ರೈಲ್ವೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸಾಕಷ್ಟು ಸಭೆ ನಡೆಸಿ ಚರ್ಚಿಸಿದ್ದೇವೆ. ಮುಖ್ಯಮಂತ್ರಿ

Advertisement

ಬಿ.ಎಸ್‌. ಯಡಿಯೂರಪ್ಪ ನಿಗಮ ಮಂಡಳಿಗಳಿಗೆನೇಮಕ ಮಾಡಿ ಬೊಕ್ಕಸದ ಹಣ ದುಂದುವೆಚ್ಚ ಮಾಡುವುದೇ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

ಭದ್ರಾ ಮೇಲ್ದಂಡೆಯಿಂದ ವಿವಿ ಸಾಗರಕ್ಕೆ ನೀರು ಹರಿಸಿದ್ದು ನಮ್ಮ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ರೈಲ್ವೆ ಯೋಜನೆಯನ್ನು ಯಾಕೆ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಪ್ರಶ್ನಿಸಿದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌,ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಕೆ.ಪಿ. ಸಂಪತ್‌, ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next