Advertisement
ಬಿಜೆಪಿ ಬಿಡಲು ತೀರ್ಮಾನಿಸಿದ್ದೇಕೆ?ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪ್ರೇರಿತನಾಗಿ ಸಾರ್ವಜನಿಕ ಜೀವನದಲ್ಲಿ ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದೇನೆ. ಈ ಗುಣಗಳೇ ಇಂದು ನನಗೆ ಶಾಪವಾಗಿ ಪರಿಣಮಿಸಿವೆ. 6 ತಿಂಗಳ ಹಿಂದೆ ರಾಜ್ಯ ನಾಯಕರ ಮುಂದೆ ಇಟ್ಟ ಎರಡು ಸಣ್ಣ ಬೇಡಿಕೆಗಳನ್ನು ಈಡೇರಿಸಲಿಲ್ಲ. ಹೀಗಾಗಿ ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪರ್ಯಾಯವನ್ನು ಕಂಡುಕೊಳ್ಳಲು 30 ವರ್ಷದಿಂದ ಇದ್ದ ಬಿಜೆಪಿಯಿಂದ ಹೊರಹೋಗಲು ಈ ನಿರ್ಧಾರ ಮಾಡಿದೆ.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಕಚೇರಿಗೆ ಪರ್ಯಾಯವಾಗಿ ಬೆಂಗಳೂರು ಮೂಲದ
ಉದ್ಯಮಿಯೊಬ್ಬರು ಪಕ್ಷದ ಹೆಸರಲ್ಲಿ ನಡೆಸುತ್ತಿರುವ ಅನಧಿಕೃತ ಕಚೇರಿ ಮುಚ್ಚಿಸುವುದು ಹಾಗೂ ಪಿರಿಯಾಪಟ್ಟಣದಲ್ಲಿ ನಾಯಕತ್ವ ಯಾರದ್ದು ಎಂಬುದನ್ನು ಸ್ಪಷ್ಟಪಡಿಸಿ ಎಂಬ ಬೇಡಿಕೆಗಳನ್ನು 6 ತಿಂಗಳ ಹಿಂದೆ ಪಕ್ಷದ ರಾಜ್ಯ ನಾಯಕರ ಮುಂದಿಟ್ಟಿದ್ದೆ. ಈವರೆಗೆ ಈಡೇರಿಲ್ಲ. ಇದರಿಂದಾಗಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬೆಂಗಳೂರು ಮೂಲದ ಉದ್ಯಮಿ ಮಂಜುನಾಥ್‌ರನ್ನು ಪಿರಿಯಾಪಟ್ಟಣಕ್ಕೆ ಕರೆತಂದವರ್ಯಾರು?
ವರ್ಷದ ಹಿಂದೆ ಸಮಾಜಸೇವೆ ಹೆಸರಲ್ಲಿ ಪಿರಿಯಾಪಟ್ಟಣಕ್ಕೆ ಬಂದವರನ್ನು ನನ್ನ ವಿರೋಧದ ನಡುವೆ ಇಲ್ಲಿನ ಸಂಸದರು ಪಕ್ಷಕ್ಕೆ ಕರೆ ತಂದರು. ಜತೆಗೆ ಪಕ್ಷ ಸೇರಿದ 15 ದಿನದಲ್ಲೇ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಮಾಡಿದರು. ನಂತರ ಪಿರಿಯಾಪಟ್ಟಣದಲ್ಲಿನ ಅವರ ಕಚೇರಿ ಬಿಜೆಪಿ ಕಚೇರಿಯಾಯಿತು. ಬೀದಿಯಲ್ಲಿ ನಿಂತು ಬಿಜೆಪಿಯಿಂದ ನಾನೇ ಅಭ್ಯರ್ಥಿ ಎಂದು ಸ್ವಯಂಘೋಷಣೆ ಮಾಡಿಕೊಳ್ಳುತ್ತಾ ಬಂದರು.
Related Articles
ಪ್ರಾಮಾಣಿಕ ಕಾರ್ಯಕರ್ತರಿಗಿಂತ ಹಣಬಲವೇ ಹೆಚ್ಚು ಎನಿಸಿರಬಹುದು. ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಎರಡು ಅವಧಿಗೆ ಪಕ್ಷದ ಜಿಲ್ಲಾಧ್ಯಕ್ಷನಾಗಿ, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯನಾಗಿ, ರಾಜ್ಯ ರೈತ ಮೋರ್ಚಾ ಅಧ್ಯಕ್ಷನಾಗಿ ಎರಡು 2 ಅವಧಿಗೆ ಕೆಲಸ ಮಾಡಿದ್ದೇನೆ. ನನ್ನಂತವರ ಸೇವೆ ಬೇಡ ಎನಿಸಿರಬಹುದು.
Advertisement
ಪಕ್ಷದ ನಾಯಕರು ನಿಮ್ಮನ್ನು ಬಲಿಪಶು ಮಾಡಿದ್ದೆಲ್ಲಿ?3 ವರ್ಷಗಳ ಹಿಂದೆ ಪಕ್ಷದ ಅಂದಿನ ರಾಜಾÂಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಲ್.ಸಂತೋಷ್ ಅವರ ಭರವಸೆಯ ಮೇಲೆ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ಕೇವಲ 6,700 ಮತಗಳ ಅಂತರದಿಂದ ಸೋತಿದ್ದ ನನ್ನನ್ನು ಕಳೆದ ಬಾರಿ ಬಲವಂತವಾಗಿ ಹಾಸನದಲ್ಲಿ ದೇವೇಗೌಡರ ವಿರುದಟಛಿ ಸ್ಪರ್ಧೆ ಮಾಡಿಸಿ, ಠೇವಣಿ ಕಳೆದುಕೊಳ್ಳುವಂತೆ ಮಾಡಿದರು. ಈಗ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ವಿರುದಟಛಿ ಸ್ಪರ್ಧೆ ಮಾಡಿ ಎನ್ನುತ್ತಿದ್ದಾರೆ. ರಾಜಕೀಯವಾಗಿ ಬಲಿಪಶು ಮಾಡಲು ಷಡ್ಯಂತ್ರ ನಡೆದಿದೆ. ಪಕ್ಷ ನಿಮಗೆ ಎಲ್ಲವನ್ನೂ ನೀಡಿದೆಯಲ್ಲವೇ?
ಹೌದು. ಶಾಸಕ, ಸಂಸದ, ಮಂತ್ರಿ ಏನೆಲ್ಲಾ ಆಗಿದ್ದೇನೆಯೋ ಅದು ಬಿಜೆಪಿಯಿಂದಲೇ. ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ರಾಜಾÂಧ್ಯಕ್ಷರಾದ ಹಿನ್ನೆಲೆಯಲ್ಲಿ ಅದೇ ಸಮುದಾಯಕ್ಕೆ ಅವಕಾಶ ನೀಡಬೇಕಾದಾಗ ಯಡಿಯೂರಪ್ಪ ನನಗೆ ಅವಕಾಶ ಕೊಟ್ಟರು. ಅದಕ್ಕೆ ನಾನು ಆಭಾರಿ. ಆದರೆ, ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗುತ್ತಿದ್ದಂತೆ ನನ್ನನ್ನು ಮಾತ್ರ ಸಂಪುಟದಿಂದ ಕೈಬಿಟ್ಟರು. ಕೆಲವು ವ್ಯಕ್ತಿಗಳಿಂದ ನನಗೆ ಆಗುತ್ತಿರುವ ಅವಮಾನದ ದೃಷ್ಟಿಯಿಂದ ಈ ನಿರ್ಧಾರ
ತೆಗೆದುಕೊಳ್ಳಬೇಕಾಯಿತು. ನಿಮ್ಮ ಮುಂದಿನ ನಡೆ ಏನು?
ಈಗಷ್ಟೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಲು ಕಾಲಾವಕಾಶ ಬೇಕು. ವಾರದೊಳಗೆ ಪರ್ಯಾಯವನ್ನು ಕಂಡುಕೊಳ್ಳುತ್ತೇನೆ. – ಗಿರೀಶ್ ಹುಣಸೂರು