Advertisement

ಉಡುಪಿ ನಗರಸಭಾ ಮಾಜಿ ಸದಸ್ಯ, ಉದ್ಯಮಿ ಎಂ. ರಾಧಾಕೃಷ್ಣ ಪೈ ನಿಧನ

01:33 PM Jun 17, 2023 | Team Udayavani |

ಉಡುಪಿ: ದಿವಂಗತ ಡಯಾನಾ ಮೋಹನ್‌ದಾಸ್ ಪೈ ಅವರ ಕಿರಿಯ ಸಹೋದರ, ನಗರದ ಖ್ಯಾತ ಉದ್ಯಮಿ ಮತ್ತು ಮಾಜಿ ನಗರಸಭಾ ಸದಸ್ಯರಾಗಿದ್ದ ಎಂ. ರಾಧಾಕೃಷ್ಣ ಪೈ (89) ಅವರು ಶನಿವಾರ ಬೆಳಿಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಡಾ.ವಿ.ಎಸ್.ಆಚಾರ್ಯ ಅವಧಿಯಲ್ಲಿ ಇವರು ನಗರಸಭೆ ಸದಸ್ಯರಾಗಿದ್ದರು. ಉಡುಪಿಯ ರಾಧಾಕೃಷ್ಣ ಪ್ರಾವಿಷನ್ ಸ್ಟೋರ್ಸ್ ಮಾಲಕರಾಗಿದ್ದರು.

ಅವರ ಅಂತ್ಯಕ್ರಿಯೆಯು ಪ್ರಕ್ರಿಯೆ ಡಯಾನ ಟಾಕೀಸ್ ನ ಬಳಿ ಇರುವ  ಸ್ವಗೃಹದಲ್ಲಿ ಮಧ್ಯಾಹ್ನ 2:00 ಗಂಟೆಗೆ ನೆರವೇರಲಿದೆ. ನಂತರ  ಬೀಡಿನ ಗುಡ್ಡೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮೃತರು ಪತ್ನಿ ಹಾಗೂ ಪುತ್ರ ರಮಾನಂದ ಪೈ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next