Advertisement

ಮಾಜಿ ಲೋಕಾಯುಕ್ತ ಭಾಸ್ಕರ್‌ರಾವ್‌ಗೆ ವಾರೆಂಟ್‌

08:40 AM Aug 06, 2017 | Team Udayavani |

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಕೊಡಿಸಲು ಸರ್ಕಾರಿ ಅಧಿಕಾರಿಯೊಬ್ಬರಿಂದ
ಲಂಚ ಬೇಡಿಕೆಯಿಟ್ಟ ಆರೋಪ ಪ್ರಕರಣದ ವಿಚಾರಣೆಗೆ ಪದೇಪದೆ ಗೈರು ಹಾಜರಾಗುತ್ತಿದ್ದ ಕಳಂಕಿತ ಮಾಜಿ
ಲೋಕಾಯುಕ್ತ ನ್ಯಾ. ಭಾಸ್ಕರ್‌ರಾವ್‌ಗೆ ಲೋಕಾಯುಕ್ತ ನ್ಯಾಯಾಲಯವು ಜಾಮೀನು ಸಹಿತ ವಾರೆಂಟ್‌ ಜಾರಿಗೊಳಿಸಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯವು ಶನಿವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ
ಪ್ರಕರಣದ 5ನೇ ಆರೋಪಿಯಾದ ಭಾಸ್ಕರ್‌ರಾವ್‌ ಅಥವಾ ಅವರ ಪರ ವಕೀಲರು ಗೈರು ಹಾಜಗಿದ್ದರು. ಹಲವು ಬಾರಿ
ಸಮನ್ಸ್‌ ನೀಡಿದ್ದರೂ ವಿಚಾರಣೆ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ. ಗೋಪಾಲ್‌ ಆರೋಪಿ
ಭಾಸ್ಕರ್‌ರಾವ್‌ಗೆ ಜಾಮೀನು ಸಹಿತ ವಾರೆಂಟ್‌ ಜಾರಿಗೊಳಿಸಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿದರು. 2013ರಲ್ಲಿ
ತುಂಗಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದ ಪಿ.ಬಿ.ಚನ್ನಬಸಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ದಾವಣಗೆರೆ ಲೋಕಾಯುಕ್ತ ಪೊಲೀಸರು, ಅಧಿಕಾರಿ ಚನ್ನಬಸಪ್ಪ ವಿರುದಟಛಿ ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣ ದಾಖಲಿಸಿಕೊಂಡಿದ್ದರು.

Advertisement

ಈ ನಡುವೆ ಚೆನ್ನಬಸಪ್ಪ ಅವರನ್ನು ಸಂಪರ್ಕಿಸಿದ್ದ ಭಾಸ್ಕರ್‌ ರಾವ್‌ ಪುತ್ರ ಅಶ್ವಿ‌ನ್‌ರಾವ್‌ ಹಾಗೂ ಆತನ ಸಹಚರರು,
ಈ ಪ್ರಕರಣದಲ್ಲಿ ಪೊಲೀಸರಿಂದ “ಬಿ” ರಿಪೋರ್ಟ್‌ ಸಲ್ಲಿಸುವುದಾಗಿ ತಿಳಿಸಿ ಲಂಚಕ್ಕೆ ಬೇಡಿಕೆಯಿ ಟ್ಟಿದ್ದರು. ಇದರಲ್ಲಿ
ಭಾಸ್ಕರ್‌ ರಾವ್‌ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿದ್ದ ಲೋಕಾಯುಕ್ತ ವಿಶೇಷ ತನಿಖಾ ತಂಡ ಭಾಸ್ಕರ್‌ರಾವ್‌ ಅವರನ್ನು 5ನೇ ಆರೋಪಿಯನ್ನಾಗಿ ಪರಿಗಣಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ ಶೀಟ್‌ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next