Advertisement

ಪಕ್ಷ ನೋಟ: ತೆಲಂಗಾಣದಲ್ಲಿ ಪ್ರಥಮ ಸರ್ಕಾರ ರಚಿಸಿದ ಬಿಆರ್‌ಎಸ್‌

07:41 PM Apr 02, 2024 | Team Udayavani |

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವದ ವಹಿಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಂದೆ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಎಂದು ಮರುನಾಮಕರಣಗೊಂಡಿತು. ಕೆ ಚಂದ್ರಶೇಖರ್‌ ರಾವ್‌ ಅವರು ಟಿಡಿಪಿಗೆ ರಾಜೀನಾಮೆ ನೀಡಿ 2001 ಏಪ್ರಿಲ್‌ 27ರಂದು ಪಕ್ಷವನ್ನು ಆರಂಭಿಸಿದರು.

Advertisement

2014ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆದ್ದ ಬಿಆರ್‌ಎಸ್‌ (ಆಗ ಟಿಆರ್‌ಎಸ್‌) ತೆಲಂಗಾಣದ ಮೊದಲ ಸರ್ಕಾರವನ್ನು ರಚಿಸಿತು. ಕೆ ಚಂದ್ರಶೇಖರ್‌ ರಾವ್‌ ಮೊದಲ ಸಿಎಂ ಆದರು. 2018ರಲ್ಲೂ ಅದೇ ಫ‌ಲಿತಾಂಶವನ್ನು ಟಿಆರ್‌ಎಸ್‌ ರಿಪಿಟ್‌ ಮಾಡಿತು. ಆದರೆ, 2023ರಲ್ಲಿ ಮಾತ್ರ ಕಾಂಗ್ರೆಸ್‌ ಎದುರು ಸೋಲು ಅನುಭವಿಸಿ, ತೆಲಂಗಾಣದ ಪ್ರತಿಪಕ್ಷದ ಸ್ಥಾನದಲ್ಲಿದೆ.

ಬಿಆರ್‌ಎಸ್‌ ಬಳಿ ಸದ್ಯ 3 ಲೋಕಸಭಾ ಮತ್ತು 5 ರಾಜ್ಯ ಸಭಾ ಸದಸ್ಯರಿದ್ದರೆ, 37 ಶಾಸಕರು ಮತ್ತು 27 ಎಮ್ಮೆಲ್ಸಿಗಳಿದ್ದಾರೆ. ರಾಷ್ಟ್ರ ರಾಜಕರಾಣದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಕೂಟಗಳನ್ನು ಬಿಆರ್‌ಎಸ್ ಸೇರಿದೆ. ಕೆಲವೊಮ್ಮೆ ತೃತೀಯ ರಂಗದ ಭಾಗವೂ ಆಗಿದೆ.

ಗೊತ್ತಾ?

ಅತಿದೊಡ್ಡ ಲೋಕಸಭಾ ಕ್ಷೇತ್ರ ಲಡಾಕ್‌

Advertisement

ಮತದಾರರ ದೃಷ್ಟಿಯಿಂದ ಮಲ್ಕಾಜ್‌ಗಿರಿ ಅತಿದೊಡ್ಡ ಲೋಕಸಭಾ ಕ್ಷೇತ್ರದವಾದರೆ, ವಿಸ್ತೀರ್ಣ ದೃಷ್ಟಿಯಿಂದ ಲಡಾಕ್‌ ಅತಿದೊಡ್ಡ ಕ್ಷೇತ್ರವಾಗಿದೆ. ಇದು 173,266 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ!

Advertisement

Udayavani is now on Telegram. Click here to join our channel and stay updated with the latest news.

Next