Advertisement

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

03:48 PM Mar 28, 2024 | Team Udayavani |

ಹೈದರಾಬಾದ್ ಖ್ಯಾತ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಗೌಪ್ಯವಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದೆ ಎಲ್ಲೆಡೆ ವೈರಲ್‌ ಆಗಿತ್ತು. ಇದೀಗ ಈ ಬಗ್ಗೆ ಜೋಡಿ ಸ್ಪಷ್ಟನೆ ನೀಡಿದೆ.

Advertisement

ತಾವಿಬ್ಬರು ಮದುವೆಯಾಗಿಲ್ಲ, ಎಂಗೇಜ್‌ ಮೆಂಟ್‌ ಆಗಿದ್ದೇವೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಇಬ್ಬರು ಫೋಟೋ ಹಂಚಿಕೊಂಡಿದ್ದಾರೆ. ಎಂಗೇಜ್‌ ಮೆಂಟ್‌ ರಿಂಗ್‌ ಹಾಕಿರುವ ಫೋಟೋ ಕೆಳಗೆ ಅವರು ‘He said yes’, ‘She said yes’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಅಧಿಕೃತವಾಗಿ ತಮ್ಮ ಸಂಬಂಧವನ್ನು ಘೋಷಿಸಿದ್ದಾರೆ.

ಬುಧವಾರ (ಮಾ.27) ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರಂನಲ್ಲಿರುವ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ  ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ ಎಂದು ʼಗ್ರೇಟ್ ಆಂಧ್ರʼ  ವರದಿ ಆಗಿತ್ತು.

ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ 2021 ರಲ್ಲಿ ಬಂದ ‘ಮಹಾ ಸಮುದ್ರಂʼ ಸಿನಿಮಾದಲ್ಲಿ ಜೊತೆಯಾಗಿ ಸಿನಿಮಾ ಮಾಡಿದ್ದರು. ಆ ಬಳಿಕ ಅವರಿಬ್ಬರು ಆತ್ಮೀಯವಾಗಿ ನಾನಾ ಕಡೆ ಕಾಣಿಸಿಕೊಂಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡಿ ಹಂಚಿಕೊಳ್ಳುತ್ತಿದ್ದರು. ಇಬ್ಬರು ಡೇಟ್‌ ಮಾಡುತ್ತಿದ್ದರೂ, ಅದನ್ನು ಎಲ್ಲೂ ಕೂಡ ಬಹಿರಂಗವಾಗಿ ಹೇಳಿರಲಿಲ್ಲ.

ಇಬ್ಬರ ಎಂಗೇಜ್‌ ಮೆಂಟ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇಬ್ಬರಿಗೆ ನೂರಾರು ಮಂದಿ ಶುಭಕೋರಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next