Advertisement

ಅಗಲಿದ ನಾಯಕ ಕೆ ಎಂ ಮಾಣಿ ಕೋಟ್ಟಯಂನತ್ತ ಅಂತಿಮ ಯಾತ್ರೆ ಆರಂಭ

09:20 AM Apr 11, 2019 | Team Udayavani |

ಕೊಚ್ಚಿ : ನಿನ್ನೆ ಮಂಗಳವಾರ ತನ್ನ 86ರ ಹರೆಯದಲ್ಲಿ ನಿಧನ ಹೊಂದಿದ ಕೇರಳ ಕಾಂಗ್ರೆಸ್‌ (ಎಂ) ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಹಣಕಾಸು ಸಚಿವ ಕೆ ಎಂ ಮಾಣಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಇಂದು ಬುಧವಾರ ಬೆಳಗ್ಗೆ ಇಲ್ಲಿಂದ, ಅವರ ಹಲವು ದಶಕಗಳ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದ್ದ ಕೋಟ್ಟಯಂ ಗೆ ಆರಂಭಗೊಂಡಿತು.

Advertisement

ಮಾಣಿ ಅವರ ಪಾರ್ಥಿವ ಶರೀರವಿದ್ದ ರಾಜ್ಯ ಸರಕಾರಿ ಬಸ್ಸು ಕೋಟ್ಟಯಂ ಗೆ ಸಾಗುವಲ್ಲಿನ ಮುಖ್ಯ ಪಟ್ಟಣಗಳಲ್ಲೆಲ್ಲ ಸಾವಿರಾರು ಮಂದಿ ಜಮಾಯಿಸಿ ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದರು.

ಕೋಟ್ಟಯಂ ನ ಐತಿಹಾಸಿಕ ತಿರುನಕ್ಕರ ಮೈದಾನದಲ್ಲಿ ಮಾಣಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಮತ್ತು ನಾಳೆ ಗುರುವಾರ ಅವರ ಹುಟ್ಟೂರಾದ ಪಾಳಕ್ಕೆ ಒಯ್ಯಲಾಗುವುದು. ಅಲ್ಲಿನ ಸೈಂಟ್‌ ಥಾಮಸ್‌ ಕ್ಯಾಥಡ್ರಲ್‌ ನಲ್ಲಿ ಮಧ್ಯಾಹ್ನ ಪೂರ್ತಿ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕೇರಳ ಕಾಂಗ್ರೆಸ್‌ (ಎಂ) ರಾಜ್ಯ ಸಮಿತಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next