Advertisement

ಮಾಜಿ ರಾಜ್ಯಪಾಲ, ಸಿಬಿಐನ ಮಾಜಿ ನಿರ್ದೇಶಕ ಅಶ್ವಿನಿ ಕುಮಾರ್ ಆತ್ಮಹತ್ಯೆ

10:40 PM Oct 07, 2020 | Karthik A |

ಮಣಿಪಾಲ: ಸಿಬಿಐ ಮಾಜಿ ಮುಖ್ಯಸ್ಥ ಮತ್ತು ಹಿಮಾಚಲ ಮಾಜಿ ಡಿಜಿಪಿ ಅಶ್ವಿನಿ ಕುಮಾರ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪ್ರಕಾರ ಅವರು ಶಿಮ್ಲಾದ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.

Advertisement

ಶಿಮ್ಲಾದ ಎಸ್‌ಪಿ ಮೋಹಿತ್ ಚಾವ್ಲಾ ಈ ಘಟನೆಯನ್ನು ದೃಢಪಡಿಸಿದ್ದು, ಇದು ಆಘಾತಕಾರಿ ಪ್ರಕರಣವಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಅಶ್ವಿನಿ ಕುಮಾರ್ ಆದರ್ಶಪ್ರಾಯರು ಎಂದು ಚಾವ್ಲಾ ಹೇಳಿದ್ದಾರೆ.

ಅಶ್ವಿನಿ ಕುಮಾರ್ ಅವರ ಮೃತ ದೇಹವು ಶಿಮ್ಲಾದ ಬ್ರೇಕ್ ಹೋಸ್ಟ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಆತ್ಮಹತ್ಯೆಗೆ ಕಾರಣ ಏನು ಏಂಬುದನ್ನು ಉಲ್ಲೇಖಿಸಿರುವ ಪತ್ರವನ್ನು ವಶಪಡಿಸಿಕೊಂಡಿದ್ದು, ಜೀವನದಿಂದ ಬೇಸರಗೊಂಡ ನಾನು ಮುಂದಿನ ಪ್ರಯಾಣಕ್ಕೆ ಹೊರಟಿದ್ದೇನೆ ಎಂದು ಬರೆಯಲಾಗಿದೆ.

ಅಶ್ವಿನಿ ಕುಮಾರ್ ಅವರನ್ನು 2008 ರಲ್ಲಿ ಮಾರ್ಚ್ 2013 ರಿಂದ ಜೂನ್ 2014 ರವರೆಗೆ ಸಿಬಿಐ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಅವರು 2013ರಲ್ಲಿ ಅಲ್ಪಾವಧಿಗೆ ಮಣಿಪುರದ ರಾಜ್ಯಪಾಲರಾಗಿದ್ದರು. ಆಗಸ್ಟ್ 2006ರಿಂದ ಜುಲೈ 2008ರ ವರೆಗೆ ಅವರು ಹಿಮಾಚಲ ಪ್ರದೇಶದ ಡಿಜಿಪಿ, 2 ಆಗಸ್ಟ್ 2008 ಮತ್ತು 30 ನವೆಂಬರ್ 2010 ರ ನಡುವೆ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು. ಆ ಸಮಯದಲ್ಲಿ ಶೋಹ್ರಾಬುದ್ದೀನ್ ಶೇಖ್ ಅವರ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಬಂಧಿಸಲಾಗಿತ್ತು.

ಅಶ್ವಿನಿ ಕುಮಾರ್ ಅವರನ್ನು 1985ರಲ್ಲಿ ಶಿಮ್ಲಾದ ಎಸ್‌ಪಿ ಆಗಿದ್ದಾಗ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ಆಗಿ ನೇಮಿಸಲಾಯಿತು. 1985ರಿಂದ 1990 ರವರೆಗೆ ಅವರು ಎಸ್‌ಪಿಜಿಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಪಿಎಂಒನಲ್ಲಿ ಸಹಾಯಕ ನಿರ್ದೇಶಕರಾಗಿ, ಭಾರತೀಯ ಗುಪ್ತಚರ ಸಂಸ್ಥೆಗಳಲ್ಲೂ ಕೆಲಸ ಮಾಡಿದ ಉತ್ತಮ ಅನುಭವ ಹೊಂದಿದ್ದರು.

Advertisement

ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದ ಅಶ್ವಿನಿ ಕುಮಾರ್ 1950 ರ ನವೆಂಬರ್ 15ರಂದು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ನಹಾನ್‌ನಲ್ಲಿ ಜನಿಸಿದರು. ಕಿನ್ನೌರ್ ಜಿಲ್ಲೆಯ ಕೋತಿ ಗ್ರಾಮದ ಬಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮಾಡಿ, ಡೆಹ್ರಾಡೂನ್‌ನ ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು ಮತ್ತು ಬಿಲಾಸ್ಪುರದ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು. ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಸರಕಾರಿ ಕಾಲೇಜಿನಲ್ಲಿ ಪದವಿ ಪಡೆದು ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ ಹೊಂದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next