ಚಂಡೀಗಢ: ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ 10ನೇ ತರಗತಿಯ ಇಂಗ್ಲಿಷ್ ಭಾಷೆಯ ಪರೀಕ್ಷೆ ಬರೆದಿದ್ದಾರೆ.
ಸಿರ್ಸಾ ನಗರದ ಆರ್ಯ ಕನ್ಯಾ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಅವರು ಪರೀಕ್ಷೆ ಬರೆದಿದ್ದಾರೆ.
ಓಂ ಪ್ರಕಾಶ್ ಅವರು 2017ರಲ್ಲಿ ಜೈಲಿನಲ್ಲಿದ್ದುಕೊಂಡೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್‌ನಲ್ಲಿ 10ನೇ ತರಗತಿ ಅಧ್ಯಯನ ಮಾಡಿ ಪರೀಕ್ಷೆ ಬರೆದಿದ್ದರು. ಅದಾದ ನಂತರ ಕಳೆದ ವರ್ಷ 12ನೇ ತರಗತಿ ಪರೀಕ್ಷೆಯನ್ನೂ ಬರೆದಿದ್ದರು. ಆದರೆ 10ನೇ ತರಗತಿ ಇಂಗ್ಲಿಷ್ ಪರಿಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಅವರು, ಆ ವಿಷಯದಲ್ಲಿ ಪಾಸ್ ಆಗುವವರೆಗೆ 12ನೇ ತರಗತಿ ಫಲಿತಾಂಶ ಪ್ರಕಟಿಸಲಾಗದು ಎಂದು ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು.
ಇದನ್ನೂ ಓದಿ:ಜಾಮೀನು ಆದೇಶ ಪ್ರತಿ ಬಾರದ್ದಕ್ಕೆ ವಿನಯ್‌ಗೆ ಸಿಗ್ಲಿಲ್ಲ ಜೈಲು ಬಿಡುಗಡೆ ಭಾಗ್ಯ
86 ವರ್ಷದ ಓಂ ಪ್ರಕಾಶ್ ಕೈ ನೋವಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿ ಸಹಾಯಕ ನೊಂದಿಗೆ ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರ ನೇಮಕ ಅವ್ಯವಹಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಚೌಟಾಲಾ ಕಳೆದ ತಿಂಗಳು ಕಾರಾಗೃಹದಿಂದ ಬಿಡುಗಡೆಯಾಗಿದ್ದರು.