Advertisement
ಕೇಶುಭಾಯಿ ಪಟೇಲ್ ಅವರು ಗುರುವಾರ ಬೆಳಗ್ಗೆ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಆಸ್ಪತ್ರೆಯಲ್ಲಿ ನಿಧನಹೊಂದಿರುವುದಾಗಿ ವರದಿ ತಿಳಿಸಿದೆ.
Related Articles
Advertisement
1980ರವರೆಗೆ ಬಿಜೆಪಿಯ ಕಟ್ಟಾ ಹುರಿಯಾಳಾಗಿದ್ದ ಕೇಶುಭಾಯಿ ಪಟೇಲ್ ಅವರು 2012ರಲ್ಲಿ ಬಿಜೆಪಿ ಪಕ್ಷ ತೊರೆದು ತಮ್ಮದೇ ಆದ “ಗುಜರಾತ್ ಪರಿವರ್ತನ್ ಪಾರ್ಟಿ”ಯನ್ನು ಸ್ಥಾಪಿಸಿದ್ದರು. 2012ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಟೇಲ್ ಶಾಸಕರಾಗಿ ಆಯ್ಕೆಯಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ 2014ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
1928ರ ಜುಲೈ 24ರಂದು ಗುಜರಾತ್ ನ ವಿಸ್ವಾದರ್ ನಲ್ಲಿ ಕೇಶುಭಾಯಿ ಪಟೇಲ್ ಜನಿಸಿದ್ದರು. 1945ರಲ್ಲಿ ಪಟೇಲ್ ರಾಷ್ಟ್ರೀಯ ಸ್ವಯಂ ಸೇವಕ್ ಸಂಘಕ್ಕೆ ಸೇರ್ಪಡೆಗೊಂಡಿದ್ದರು. ತುರ್ತುಪರಿಸ್ಥಿತಿ ವೇಳೆ ಜೈಲುವಾಸ ಅನುಭವಿಸಿದ್ದರು.