Advertisement

ಭಾರತ ಕೋಚ್‌ ರವಿಶಾಸ್ತ್ರಿಯಿಂದ ಮಾಜಿ ಕ್ರಿಕೆಟಿಗರಿಗೆ ಅವಮಾನ?

08:22 AM Dec 19, 2017 | Team Udayavani |

ಮುಂಬೈ: ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ ಭಾರತ ತಂಡದ ಮಾಜಿ ಕ್ರಿಕೆಟಿಗರನ್ನು ಅವಮಾನಿಸಿದ್ದಾರೆಯೇ? ಹೀಗೊಂದು ಚರ್ಚೆ ಶುರುವಾಗಿದೆ. ಆಂಗ್ಲ ಟೀವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರವಿಶಾಸ್ತ್ರಿ, ನಾವು 
ಕಾಲಹರಣಕ್ಕಾಗಿ ಪಂದ್ಯವಾಡಲು ತೆರಳುವುದಿಲ್ಲ ಮತ್ತು ಸಂಖ್ಯೆ ಭರ್ತಿಯ ತಂಡವೂ ಇದಲ್ಲ ಎಂಬ ಹೇಳಿಕೆ ನೀಡಿದ್ದರು. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಾಗಾದರೆ ಹಿಂದಿನ ಭಾರತೀಯ ಆಟಗಾರರು, ನಾಯಕರು ಕಾಲಹರಣ ಮಾಡಿದ್ದರೇ, ಸಂಖ್ಯೆ ಭರ್ತಿಗಾಗಿ ಆಡಿದ್ದರೇ ಎಂಬ ಪ್ರಶ್ನೆ ಬಂದಿದೆ. ಇದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

Advertisement

ಸಂದರ್ಶನದಲ್ಲಿ ಮಾತನಾಡಿದ್ದ ರವಿಶಾಸ್ತ್ರಿ, ನನ್ನ ಮತ್ತು ನಾಯಕ ಕೊಹ್ಲಿ ನಡುವಿನ ಜೊತೆಯಾಟ ಅತ್ಯುತ್ತಮ. ನಾವಿಬ್ಬರೂ ಒಂದೇ ರೀತಿಯ ವ್ಯಕ್ತಿತ್ವ ಹೊಂದಿದ್ದೇವೆ. ನಮ್ಮ ಸಂಬಂಧದಲ್ಲಿ ಪರಸ್ಪರ ನಂಬಿಕೆಯಿದೆ. ನಾವಿಬ್ಬರೂ ಬಲವಾದ ಮನಃಸ್ಥಿತಿ ಹೊಂದಿದ್ದೇವೆ. ಏನೇ ಆದರೂ ಗೆಲ್ಲಬೇಕು ಎಂಬ ವ್ಯಕ್ತಿತ್ವ ನಮ್ಮದು. ನಾವು ಕ್ರಿಕೆಟ್‌ ಆಡಲು ಹೋಗುವುದು ಕಾಲಹರಣ ಮಾಡುವುದಕ್ಕಲ್ಲ
ಎಂದಿದ್ದರು. ಮುಂದುವರಿದು ಮಾತನಾಡಿದ ಅವರು, ಸದ್ಯದ ಭಾರತ ತಂಡ ಕೇವಲ ಲೆಕ್ಕ ಭರ್ತಿಗಾಗಿ ಇರುವುದಲ್ಲ. ನಾವು ಸ್ಪರ್ಧಾತ್ಮಕವಾಗಿರುವುದನ್ನು ಬಯಸುತ್ತೇವೆ. ನಾವು ಕ್ರಿಕೆಟನ್ನು ಇನ್ನೊಂದು ಎತ್ತರಕ್ಕೆ ಒಯ್ಯುವ ಆಸಕ್ತಿ ಹೊಂದಿದ್ದೇವೆ. ನೀವು ಕೊಹ್ಲಿಯಲ್ಲಿ ಏನನ್ನು ನೋಡುತ್ತೀರೋ ಅದನ್ನೇ ಪಡೆಯುತ್ತೀರಿ ಎಂದೂ ಹೇಳಿದ್ದರು.

ನಾವು ಆಡುವುದು ಕಾಲಹರಣಕ್ಕಲ್ಲ, ಈ ತಂಡದಲ್ಲಿ ಲೆಕ್ಕ ಭರ್ತಿಯ ಜನರಿಲ್ಲ ಎಂದಿರುವುದು ಹಲವು ಅನುಮಾನಗಳಿಗೆ ಕಾರಣ. ಹಿಂದೆ ಸಚಿನ್‌, ಗಂಗೂಲಿ, ದ್ರಾವಿಡ್‌, ಧೋನಿ ಕಾಲದಲ್ಲಿ ಆಡಿದ್ದ ತಂಡಗಳು ಲೆಕ್ಕ ಭರ್ತಿಯ ತಂಡಗಳೇ? ಹಿಂದಿನ ಆಟಗಾರರಿಗೆ ಬದ್ಧತೆ ಇರಲಿಲ್ಲವೇ? ಎಂಬ ಪ್ರಶ್ನೆಗಳೆದ್ದಿವೆ. 

ಧೋನಿ ಮಾಡಿದ ಮಿಂಚಿನ ಸ್ಟಂಪ್‌ ಜಯಕ್ಕೆ ಕಾರಣ!
ಮುಂಬೈ: ಭಾನುವಾರ ಭಾರತ-ಶ್ರೀಲಂಕಾ ನಡುವೆ 3ನೇ ಏಕದಿನ ಪಂದ್ಯ ನಡೆದು ಅದರಲ್ಲಿ ಭಾರತ 8 ವಿಕೆಟ್‌ಗಳಿಂದ ಗೆದ್ದು ನಗೆ ಬೀರಿದ್ದು ಈಗ ಇತಿಹಾಸದ ಪುಟಗಳನ್ನು ಸೇರಿದೆ. ಆದರೆ ಈ ಪಂದ್ಯವನ್ನು ಭಾರತ ಗೆಲ್ಲಲು ವಿಶೇಷವಾದ ಕಾರಣವೂ ಇದೆ. ಅದು ಮಾಜಿ ನಾಯಕ ಧೋನಿ! ವಿಶ್ವದ ಶ್ರೇಷ್ಠ ವಿಕೆಟ್‌ ಕೀಪರ್‌ ಗಳಲ್ಲೊಬ್ಬರೆಂದು ಹೆಸರು ಗಳಿಸಿರುವ ಧೋನಿ ಶ್ರೀಲಂಕಾದ ಪ್ರಮುಖ ಬ್ಯಾಟ್ಸ್‌ಮನ್‌ ಉಪುಲ್‌ ತರಂಗ ಅವರನ್ನು 95 ರನ್‌ಗಳಿರುವಾಗ ಅನಿರೀಕ್ಷಿತವಾಗಿ ಸ್ಟಂಪ್‌ ಔಟ್‌ ಮಾಡಿದರು. ಈ ಚುರುಕಿನ ಸ್ಟಂಪ್‌ಔಟ್‌ ಪಂದ್ಯವನ್ನು ಭಾರತದ ಕಡೆ ವಾಲಿಸಿತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಔಟಾಗುವ ವೇಳೆ ತರಂಗ 12
ಬೌಂಡರಿ, 3 ಸಿಕ್ಸರ್‌ ನೆರವಿನಿಂದ 95 ರನ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next