Advertisement

ಮಾಜಿ ಕ್ರಿಕೆಟಿಗ ರಾಬಿನ್‌ ಸಿಂಗ್‌ ಮಾಹೆ ಭೇಟಿ

06:00 AM Jun 01, 2018 | |

ಮಣಿಪಾಲ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ರಾಬಿನ್‌ ಸಿಂಗ್‌ ಗುರುವಾರ “ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌’ಗೆ (ಮಾಹೆ) ಭೇಟಿ ನೀಡಿದರು. ಮಣಿಪಾಲ್‌ ಯುನಿ ವರ್ಸಿಟಿಯಲ್ಲಿ ಕ್ರಿಕೆಟ್‌ ಸಹಿತ ಇತರ ಕ್ರೀಡೆಗಳನ್ನೊಳಗೊಂಡ ಕ್ರೀಡಾ ಅಕಾಡೆಮಿಯೊಂದನ್ನು ಆರಂಭಿಸುವ ಸಾಧ್ಯತೆ ಕುರಿತು ಪರಿಶೀಲಿಸಿದರು. 

Advertisement

ಇಲ್ಲಿನ ಮೂಲಭೂತ ಸೌಕರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಬಿನ್‌ ಸಿಂಗ್‌, ಚೆನ್ನೈಕ್ರೀಡಾ ಅಕಾಡೆಮಿಯ ಮಾದರಿಯಲ್ಲೇ ಇದನ್ನು ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಿವಿ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಡಾ| ಎಚ್‌. ವಿನೋದ್‌ ಭಟ್‌, ರಿಜಿಸ್ಟ್ರಾರ್‌ ನಾರಾಯಣ್‌ ಸಭಾಹಿತ್‌, ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌, ಉಡುಪಿ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ| ಕೃಷ್ಣ ಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next