ಕೋಲ್ಕತಾ : ಭಾರತೀಯ ಟೆನಿಸ್‌ನ ಲೆಜೆಂಡ್ರಿ ಮ್ಯಾನ್, ಮಾಜಿ ಡೇವಿಸ್ ಕಪ್ ಕೋಚ್ ಅಖ್ತರ್ ಅಲಿ ರವಿವಾರ ನಿಧನ ಹೊಂದಿದರು. 83 ವರ್ಷದ ಅವರು ಕೆಲವು ಕಾಲದಿಂದ ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದರು.
ಎರಡು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿ ದಾಗ ಅವರಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ಆದರೆ ಅವರ ದೇಹಸ್ಥಿತಿ ತೀರಾ ಬಿಗಡಾಯಿಸಿದ್ದರಿಂದ “ಕ್ಯಾನ್ಸರ್ ಥೆರಪಿ’ ಅಸಾಧ್ಯ ಎಂಬುದಾಗಿ ವೈದ್ಯರು ತಿಳಿಸಿದ್ದರು.
ಭಾರತದ ಹಾಲಿ ಡೇವಿಸ್ ಕಪ್ ಕೋಚ್ ಜೀಶಾನ್ ಅಲಿ ಅವರ ತಂದೆಯಾಗಿರುವ ಅಖ್ತರ್ ಅಲಿ, ತಮ್ಮ ಅಸಾಮಾನ್ಯ ಕೌಶಲದಿಂದ ಭಾರತೀಯ ಟೆನಿಸ್‌ನಲ್ಲಿ ವಿಶೇಷ ಛಾಪನ್ನು ಒತ್ತಿದ್ದರು. ವಿಜಯ್ ಅಮೃತ್‌ರಾಜ್, ರಮೇಶ್ ಕೃಷ್ಣನ್ ಕೂಡ ಅಲಿ ಕೋಚಿಂಗ್‌ನಿಂದ ಪ್ರಭಾವಿತರಾಗಿದ್ದರು.
ಇದನ್ನೂ ಓದಿ:ಹೈದರಾಬಾದ್ ನ 85 ವರ್ಷದಷ್ಟು ಹಳೇ ಟಾಕೀಸ್ ಕಗ್ಗತ್ತಲೆಗೆ!
ಅಖ್ತರ್ ಅಲಿ 1958-1964ರ ಅವಧಿಯಲ್ಲಿ 8 ಡೇವಿಸ್ ಕಪ್ ಪಂದ್ಯಾವಳಿ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಜತೆಗೆ ತಂಡದ ನಾಯಕರಾಗಿಯೂ ಕರ್ತವ್ಯ ನಿಭಾಯಿಸಿದ್ದರು.