Advertisement

ಸಿಇಸಿ ನೇಮಕಕ್ಕೆ “ಕೊಲಿಜಿಯಂ’ವ್ಯವಸ್ಥೆ ಬೇಕು: ಎಸ್‌.ವೈ ಖುರೇಷಿ

06:10 AM Mar 18, 2018 | Team Udayavani |

ಬೆಂಗಳೂರು: ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇರವಾಗಿ ಕೇಂದ್ರ ಸರ್ಕಾರ ನೇಮಕ ಮಾಡುವ ಬದಲು “ಕೊಲಿಜಿಯಂ’ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಪ್ರತಿಪಾದಿಸಿದ್ದಾರೆ.

Advertisement

ಫೋರಂ ಫಾರ್‌ ಡೆಮಾಕ್ರಸಿ ಆ್ಯಂಡ್‌ ಕಮ್ಯುನಲ್‌ ಅಮಿಟಿ-ಕರ್ನಾಟಕ (ಎಫ್ಡಿಸಿಎ) ಹಾಗೂ ಸೇಂಟ್‌ ಜೋಸೆಫ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶನಿವಾರ ಸೇಂಟ್‌ ಜೋಸೆಫ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಚುನಾವಣಾ ಸುಧಾರಣೆಗಳು ಮತ್ತು ಸಾಂವಿಧಾನಿಕ ಮಾದರಿಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದ ಆವರು, ವಿಶ್ವದ ಅತ್ಯಂತ ಬಲಿಷ್ಠ ಚುನಾವಣಾ ಆಯೋಗದ ನಮ್ಮದು. ಆದರೆ, ಅತ್ಯಂತ ದುರ್ಬಲ ನೇಮಕಾತಿ ವ್ಯವಸ್ಥೆ ಅದು ಹೊಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳ ನೇಮಕಾತಿಗೆ ಕೊಲಿಜಿಯಂ ಇದೆ. ಅದೇ ರೀತಿ ಸಾಂವಿಧಾನಿಕ ಸಂಸ್ಥೆ ಅಲ್ಲದಿದ್ದರೂ ಕೇಂದ್ರ ಮುಖ್ಯ ಮಾಹಿತಿ ಆಯುಕ್ತರು, ಕೇಂದ್ರ ವಿಚಕ್ಷಣಾ ಆಯುಕ್ತರ ನೇಮಕಾತಿಗೆ ಸ್ವತಂತ್ರ ಸಮಿತಿ ಇರುತ್ತದೆ. ಕೇಂದ್ರ ಗೃಹ ಸಚಿವಾಲಯದ ಒಂದು ವಿಭಾಗವಾಗಿರುವ ಸಿಬಿಐ ಮುಖ್ಯಸ್ಥರ ನೇಮಕಾತಿಗೆ ಪ್ರಧಾನಿ ಮತ್ತು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಸಮಿತಿ ಇರುತ್ತದೆ. ಆದರೆ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾತ್ರ ನೇರವಾಗಿ ಸರ್ಕಾರ ಮಾಡುತ್ತದೆ. ನಾನೂ ಸಹ ಇದೇ ದುರ್ಬಲ ವ್ಯವಸ್ಥೆಯ ಫ‌ಲಾನುಭವಿ. ಈ ರೀತಿಯ ಸರ್ಕಾರದ ನೇಮಕಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ. ರಾಷ್ಟ್ರದ ಹಿತ ಮತ್ತು ಚುನಾವಣಾ ಆಯೋಗ ಎಂಬ ಸಾಂವಿಧಾನಿಕ ಸಂಸ್ಥೆಯ ರಕ್ಷಣೆಗೆ ಇದು ಅವಶ್ಯಕ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next