Advertisement

ಮಾಜಿ ಸಂಪುಟ ಕಾರ್ಯದರ್ಶಿ ನಿಧನ

10:10 AM Feb 27, 2018 | Harsha Rao |

ಹೊಸದಿಲ್ಲಿ: ಕೇಂದ್ರ ಸರಕಾರದ ಮಾಜಿ ಸಂಪುಟ ಕಾರ್ಯದರ್ಶಿ ಟಿ.ಎಸ್‌.ಆರ್‌. ಸುಬ್ರಮಣಿಯನ್‌(79) ಸೋಮವಾರ ಹೊಸದಿಲ್ಲಿಯಲ್ಲಿ ನಿಧನ ಹೊಂದಿದ್ದಾªರೆ. ಇವರು ಎಚ್‌.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ದ್ದಾಗ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ದ್ದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

1961ರ ಉತ್ತರ ಪ್ರದೇಶ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಸುಬ್ರಮಣಿಯನ್‌, 1996ರಿಂದ 1998ರ ವರೆಗೆ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಜವುಳಿ ಸಚಿವಾಲಯದ ಕಾರ್ಯದರ್ಶಿಯೂ ಆಗಿದ್ದ ಇವರು, ಬಿಟಿ ಹತ್ತಿಯನ್ನು ಭಾರತದಲ್ಲಿ ಪರಿಚಯಿಸಿದ ನೀತಿಗೆ ಅಂಕಿತ ಹಾಕಿದ್ದರು. ಆದರೆ ಈ ಬಗ್ಗೆ ಕೆಲವು ವರ್ಷಗಳ ಹಿಂದೆ ಅವರು ಬೇಸರವನ್ನೂ ತೋಡಿಕೊಂಡಿದ್ದರು.

ನಿವೃತ್ತರಾದ ಅನಂತರದಲ್ಲಿ ಇವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಸಮಿತಿಗೆ ಮುಖ್ಯಸ್ಥರಾಗಿದ್ದರು. ಆದರೆ ಇವರು 2016ರಲ್ಲಿ ಸಲ್ಲಿಸಿದ ವರದಿಯನ್ನು ಸರಕಾರ ಸಮ್ಮತಿಸಲಿಲ್ಲ. ಅಲ್ಲದೆ ಹಲವು ಸರಕಾರಿ ಸೇವೆಗಳ ಸುಧಾರಣೆಗೆ ಕಾರಣವಾಗಿ ದಾವೆಗಳಿಗೂ ಇವರು ಮುಖ್ಯಸ್ಥರಾಗಿದ್ದರು. ನೀತಿ ನಿರೂಪಣೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್‌ ಮೂರು ಪುಸ್ತಕಗಳನ್ನು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next