Advertisement

200 ಕ್ಕೂ ಹೆಚ್ಚು ಹುಡುಗಿಯರಿಗೆ ಕಿರುಕುಳ: ಮಾಜಿ ಪೊಲೀಸ್ ಅಧಿಕಾರಿಗೆ 12 ವರ್ಷ ಜೈಲು

07:36 PM Oct 25, 2023 | Team Udayavani |

ಲಂಡನ್: 100 ಕ್ಕೂ ಹೆಚ್ಚು ಮಕ್ಕಳ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡ ನಂತರ ಬ್ರಿಟಿಷ್ ಮಾಜಿ ಪೊಲೀಸ್ ಅಧಿಕಾರಿಗೆ ಬುಧವಾರ ಕನಿಷ್ಠ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement

Snapchat ನಲ್ಲಿ 200 ಕ್ಕೂ ಹೆಚ್ಚು ಹುಡುಗಿಯರಿಗೆ ತಮ್ಮ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಸಾಬೀತಾಗಿದೆ.

24 ವರ್ಷದ ಲೆವಿಸ್ ಎಡ್ವರ್ಡ್ಸ್ ಫೋನ್ ಅಪ್ಲಿಕೇಶನ್‌ನಲ್ಲಿ ಹದಿಹರೆಯದ ಹುಡುಗನಂತೆ ಪೋಸ್ ನೀಡುವ ಮೂಲಕ 10 ರಿಂದ 16 ವರ್ಷದೊಳಗಿನ 210 ಹುಡುಗಿಯರನ್ನು ಗುರಿಯಾಗಿಸಿಕೊಂಡಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳಲು ಹೇಳಿದ್ದು ನಿರಾಕರಿಸಿದಾಗ ಅವರ ಹುಡುಗಿಯರಲ್ಲಿ ಅನೇಕರಿಗೆ ಬೆದರಿಕೆ ಹಾಕಿದ್ದ. ಕೆಲವರು ಫೋಟೋ ಗಳನ್ನು ಬಹಿರಂಗಪಡಿಸುತ್ತಾರೆ ಎಂಬ ಭಯದಿಂದಿದ್ದ ಕಾರಣ ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದ ಎಂದು ತಿಳಿದು ಬಂದಿದೆ.

2021 ರಲ್ಲಿ ಸೌತ್ ವೇಲ್ಸ್ ಪೊಲೀಸ್ ಇಲಾಖೆಗೆ ಸೇರಿದ್ದ ಎಡ್ವರ್ಡ್ಸ್ ಹೆಚ್ಚಿನ ಅಪರಾಧಗಳನ್ನು ಮಾಡಿದಾಗ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಸುಮಾರು 160 ಮಕ್ಕಳ ಲೈಂಗಿಕ ಅಪರಾಧಗಳು ಮತ್ತು ಬ್ಲ್ಯಾಕ್‌ಮೇಲ್‌ಗಳಿಗೆ ತಪ್ಪೊಪ್ಪಿಕೊಂಡಿದ್ದಾನೆ.

Advertisement

“18 ವರ್ಷದೊಳಗಿನವರಿಗೆ ನಾವು ಹೆಚ್ಚುವರಿ ರಕ್ಷಣೆಗಳನ್ನು ಹೊಂದಿದ್ದು ಹದಿಹರೆಯದವರಿಗೆ ತಿಳಿದಿಲ್ಲದ ಯಾರಾದರೂ ಅವರನ್ನು ಸಂಪರ್ಕಿಸಿದರೆ ಅವರಿಗೆ ಹೊಸ ಪಾಪ್-ಅಪ್ ಎಚ್ಚರಿಕೆಯನ್ನು ನೀಡುವ ಕ್ರಮವನ್ನು ಇತ್ತೀಚೆಗೆ ಸೇರಿಸಿದ್ದೇವೆ” ಎಂದು ಕ್ಯಾಲಿಫೋರ್ನಿಯಾ ಮೂಲದ ಸ್ನ್ಯಾಪ್ ಚಾಟ್ ಕಂಪನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next