Advertisement

ಮಾಜಿ ಕ್ರಿಕೆಟಿಗ ಗೌರ್‌ ಘೋಷ್‌ ನಿಧನ

03:30 AM Jul 10, 2017 | |

ಕೋಲ್ಕತಾ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಂಗಾಲ ಮತ್ತು ಝಾರ್ಖಂಡ್‌ ತಂಡವನ್ನು ಪ್ರತಿನಿಧಿಸಿದ ಮಾಜಿ ಆಟಗಾರ ಗೌರ್‌ ಘೋಷ್‌ ಶನಿವಾರ ನಿಧನ ಹೊಂದಿದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.

Advertisement

1960-1971ರ ಅವಧಿಯಲ್ಲಿ 17 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಗೌರ್‌ ಘೋಷ್‌ ಬಲಗೈ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪರ್‌ ಆಗಿ ಕಾಣಿಸಿಕೊಂಡಿದ್ದರು. 17 ಇನ್ನಿಂಗ್ಸ್‌ಗಳಲ್ಲಿ 266 ರನ್‌, 13 ಕ್ಯಾಚ್‌, 16 ಸ್ಟಂಪಿಂಗ್‌ ಮಾಡಿದ್ದು ಘೋಷ್‌ ಸಾಧನೆ. ನಿವೃತ್ತಿ ಬಳಿಕ ಅವರು ಕ್ರಿಕೆಟ್‌ ಮೆಂಟರ್‌ ಆಗಿ, ಬಂಗಾಲ ಜೂನಿಯರ್‌ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದರು.

ಗೌರ್‌ ಘೋಷ್‌ ನಿಧನಕ್ಕೆ ಬಂಗಾಲ ಕ್ರಿಕೆಟ್‌ ಮಂಡಳಿಯ ಜಂಟಿ ಕಾರ್ಯದರ್ಶಿ ಸುಬೀರ್‌ ಗಂಗೂಲಿ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next