Advertisement
ನಾಮಪತ್ರ ಹಿಂದೆಗೆಯಲು ಡಿ. 3 ಕೊನೆಯ ದಿನವಾಗಿತ್ತು. ಇಂಟರ್‌ನ್ಯಾಶನಲ್ ಹಾಕಿ ಫೆಡರೇಶನ್ ಅಧ್ಯಕ್ಷ ನರೀಂದರ್ ಬಾತ್ರ ಜತೆ ಐಒಎ ಅಧ್ಯಕ್ಷ ಹುದ್ದೆಗೆ ಅಖೀಲ ಭಾರತ ಟೆನಿಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಖನ್ನಾ ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ ಗುರುವಾರ ನಡೆದ ಅಚ್ಚರಿಯ ನಡೆಯೊಂದರಲ್ಲಿ ಖನ್ನಾ ಅವರು ಐಒಎ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸ್ಪರ್ಧೆ ಯಿಂದ ಹಿಂದೆ ಸರಿಯುವ ತನ್ನ ನಿರ್ಧಾರವನ್ನು ತಿಳಿಸಿದರಲ್ಲದೇ ಡಿ. 14ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧೆಯಲ್ಲಿರುವ ಬಾತ್ರ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
Advertisement
ಐಒಎ ಅಧ್ಯಕ್ಷ ಹುದ್ದೆ ಚುನಾವಣೆ: ಹಿಂದೆ ಸರಿದ ಅನಿಲ್ ಖನ್ನಾ
01:12 PM Dec 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.