Advertisement

ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಕೆಪಿಸಿಸಿ ತಂಡ ರಚನೆ

06:55 AM Aug 18, 2018 | Team Udayavani |

ಬೆಂಗಳೂರು:ಕೊಡಗು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಅಧ್ಯಯನ ನಡೆಸಲು ಕೆಪಿಸಿಸಿ ವತಿಯಿಂದ ತಂಡ ರಚನೆ ಮಾಡಲಾಗಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಮಿಟ್ಟೂ ಚಂಗಪ್ಪ, ಕೆ.ಎಂ. ಇಬ್ರಾಹಿಂ, ಯು.ಬಿ. ವೆಂಕಟೇಶ್‌, ಮಂಜುನಾಥ ಬಂಡಾರಿ, ಜಿ.ಎ. ಭಾವ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.

ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಬಿ.ಕೆ. ಚಂದ್ರಶೇಖರ್‌, ಎಂ.ಎಸ್‌. ಆತ್ಮಾನಂದ, ಸಯ್ಯದ್‌ ಜಿಯಾವುಲ್ಲಾ, ಬಿ.ಎಸ್‌.ಶಿವಣ್ಣ, ವಾಸಂತಿ ಶಿವಣ್ಣ, ವಿನಯ್‌ ಕಾರ್ತಿಕ್‌ ಅವರನ್ನು ನೇಮಿಸಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ವೆಂಕಟಮುನಿಯಪ್ಪ, ಆಗಾ ಸುಲ್ತಾನ್‌, ಸಿ.ವಿ. ರಾಜಪ್ಪ, ಗೋಪಾಲ ಭಂಡಾರಿ ಅವರನ್ನು ನೇಮಿಸಲಾಗಿದೆ.

ಕೆಪಿಸಿಸಿ ನೇಮಿಸಿರುವ ಉಸ್ತುವಾರಿಗಳು ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ಜೊತೆ ತೊಂದರೆಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಪಿಸಿಸಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತೂಂದು ಸಮಿತಿ ರಚಿಸಲು ಕೆಪಿಸಿಸಿ ನಿರ್ಧರಿಸಿದ್ದು, ಪ್ರವಾಹ ಪೀಡಿತ ಪ್ರದೇಶದ ಜನತೆಗೆ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next