Advertisement
ಆರ್ಥಿಕ ಬಡತನ ಹಾಗೂ ಸಾಮಾಜಿಕ ಅಸಮಾನತೆ ಎಲ್ಲಿಯೇ ಇರಲಿ ಅದು ಅಭಿವೃದ್ದಿಗೆ ಮಾರಕ ಎಂಬ ಸತ್ಯದ ಅರಿವಿನ ಫಲವೇ ಈ ದಿನಾಚರಣೆ. ಪ್ರತೀ ಸಮಾಜದಲ್ಲಿಯೂ ಏಕತೆ, ಸಾಮರಸ್ಯ, ಸೌಹಾರ್ದತೆ, ಮಾನವ ಹಕ್ಕುಗಳ ನ್ಯಾಯವಿದ್ದರೆ ಅಭಿವೃದ್ಧಿ ಸುಲಭ ಸಾಧ್ಯ. ಇದರಿಂದ ದೇಶ ಮಾತ್ರವಲ್ಲದೆ ವಿಶ್ವವೇ ಪ್ರಗತಿಪಥದಲ್ಲಿರುತ್ತದೆ ಎಂಬುದು ವಿಶ್ವಸಂಸ್ಥೆಯ ಅಭಿಪ್ರಾಯ. ಈ ದಿನವು ಆದಾಯದ ಸಮಾನ ಹಂಚಿಕೆಯನ್ನು ಉತ್ತೇಜಿಸಲು ಮತ್ತು ಎಲ್ಲರಿಗೂ ಸಮಾನತೆ ಮತ್ತು ಈ ಮೂಲಕ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ವಿಶ್ವ ಸಾಮಾಜಿಕ ನ್ಯಾಯ ದಿನವು ತಾರತಮ್ಯ, ಬಡತನ, ಲಿಂಗ ಸಮಾನತೆ ಮತ್ತು ಎಲ್ಲರಿಗೂ ನ್ಯಾಯ ಪ್ರವೇಶದಂತಹ ಸಮಸ್ಯೆಗಳನ್ನು ನಿಭಾಯಿಸುವ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಗುರುತಿಸುತ್ತದೆ. ಕುಟುಂಬದ ಆಸ್ತಿಯಂತೆ ಉದ್ಯೋಗ, ಶಿಕ್ಷಣ, ಆರ್ಥಿಕ, ರಾಜಕೀಯ ಅವಕಾಶಗಳು ಜಾತಿ-ಮತ ಭೇದಗಳಿಲ್ಲದೆ ದೇಶದ ಪ್ರಜೆಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಅವಕಾಶವಂಚಿತರನ್ನು, ಅಂಚಿಗೆ ತಳ್ಳಲ್ಪಟ್ಟವರನ್ನು ಸಮಾನತೆ ಗಾಗಿ ಮೇಲೆ ತ್ತಲು ವ್ಯವಸ್ಥಿತ ಪ್ರಯತ್ನಗಳಾಗಬೇಕು. ಜಾಗತಿಕ ಒಗ್ಗಟ್ಟಿನ ಶಕ್ತಿ ಯನ್ನು ಎತ್ತಿ ಹಿಡಿಯುವುದೇ ಈ ದಿನದ ಮೂಲ ಧ್ಯೇಯವಾಗಿದೆ.
Related Articles
Advertisement
ಪ್ರತಿಯೊಬ್ಬರೂ ಸಮಾನ ಪ್ರವೇಶಾಧಿಕಾರ ವನ್ನು ಹೊಂದಿದಾಗ ಮಾತ್ರ ಸಮಾಜದ ಆರೋಗ್ಯ ಪೂರ್ಣ ಅಭಿವೃದ್ಧಿ ಸಾಧ್ಯ. 2. ನ್ಯಾಯ: ಸಾಮಾ ಜಿಕ ನ್ಯಾಯವು ಸಮಾನತೆಯ ಬಗ್ಗೆ ಮಾತ್ರ ಕಾಳಜಿ ವಹಿಸಿದಾಕ್ಷಣ ಅದು ನ್ಯಾಯಯುತ ಸಮಾಜಕ್ಕೆ ಕಾರಣವಾಗುವುದಿಲ್ಲ. ಹೆಚ್ಚು ಸಹಾಯದ ಅಗತ್ಯವಿ ರುವ ವ್ಯಕ್ತಿಗೆ ಅನುಕೂಲ ವಾಗುವಂತೆ ವ್ಯವಸ್ಥೆಯ ಒದಗಣೆ ಮುಖ್ಯವಾಗುತ್ತದೆ. 3. ಭಾಗವಹಿಸುವಿಕೆ: ಪ್ರತಿಯೊಬ್ಬರೂ ತಮ್ಮ ಕಾಳಜಿಯನ್ನು ವ್ಯಕ್ತಪಡಿ ಸಲು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಪ್ರಕ್ರಿ ಯೆಯಲ್ಲಿ ಪಾಲ್ಗೊಳ್ಳಲು ಸಮಾಜ ಅವಕಾಶ ನೀಡ ಬೇಕು. 4. ಮಾನವ ಹಕ್ಕುಗಳು: ಸಮಾಜವು ನ್ಯಾಯಯುತವಾಗಿರಲು, ಅದು ಪ್ರತಿಯೊಬ್ಬರ ನಾಗರಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು.
ಅನೌಪಚಾರಿಕ ಉದ್ಯೋಗದ ಸವಾಲು: ಇತ್ತೀಚಿನ ದಶಕಗಳಲ್ಲಿ ಜಾಗತೀಕರಣ, ಡಿಜಿಟಲ್ ಆರ್ಥಿಕತೆ, ಔದ್ಯೋಗೀಕರಣ, ಹೊಸದಾಗಿ ಅವತರಿಸುತ್ತಿರುವ ಉದ್ಯಮಗಳು ಸಹಜವಾಗಿ ಹೊಸ ಅವಕಾಶ ಹಾಗೂ ಆಯಾಮವನ್ನು ಸೃಷ್ಟಿಸಿ ಸಂಚಲನ ಮೂಡಿಸಿದೆಯಾದರೂ ಎಲ್ಲರನ್ನು ಒಳಗೊಳ್ಳುವಿಕೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಿ ಸುಸ್ಥಿರ ಬೆಳವಣಿಗೆಯನ್ನು ಸಾಕ್ಷಾತ್ಕಾರ ಗೊಳಿಸುವಲ್ಲಿ ಮಂದಗತಿಯನ್ನು ಕಾಣಬಹು ದಾಗಿದೆ. ಔದ್ಯೋಗೀಕರಣದ ಬೆಳವಣಿಗೆಗೆ ತಂತ್ರ ಜ್ಞಾನ ಮತ್ತೂಂದು ಆಯಾಮವನ್ನೇ ನೀಡಿದೆ. ವಿಶ್ವದ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ. 60 ಕ್ಕಿಂತ ಹೆಚ್ಚು, ಅಂದರೆ 2 ಬಿಲಿಯನ್ ಮಂದಿ ಅನೌಪಚಾರಿಕ ಆರ್ಥಿಕತೆಯಲ್ಲಿ ತಮ್ಮ ಜೀವನೋ ಪಾಯವನ್ನು ಕಂಡುಕೊಳ್ಳುತ್ತಾರೆ. ಅನೌಪಚಾರಿಕ ಕೆಲಸಗಾರರು ಸಾಮಾನ್ಯವಾಗಿ ಯಾವುದೇ ರೀತಿಯ ಸಾಮಾಜಿಕ ರಕ್ಷಣೆ ಅಥವಾ ಉದ್ಯೋಗ ಸಂಬಂಧಿತ ಅನುಕೂಲತೆಗಳ ಕೊರತೆಯಿಂದಾಗಿ, ಔಪಚಾರಿಕ ಕೆಲಸಗಾರರಿಗೆ ಹೋಲಿಸಿದರೆ ಹೆಚ್ಚು ದುರ್ಬಲರಾಗಿರುತ್ತಾರೆ. ಔಪಚಾರಿಕ ಆರ್ಥಿಕತೆ ಯಲ್ಲಿ ಅವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅನೌಪಚಾರಿಕ ಕ್ಷೇತ್ರವನ್ನು ಪ್ರವೇಶಿಸುತ್ತಾರೆ.
ಉದ್ಯಮ ಮತ್ತು ಮಾನವ ಅಭಿವೃದ್ಧಿ ಸ್ನೇಹಿ ಪರಿಸರ ನಮ್ಮದಾಗಲಿ: ಉದ್ಯಮದ ವಿಸ್ತರಣೆ ಮತ್ತು ಪ್ರಗತಿಗೆ ಪೂರಕವಾಗಬಲ್ಲ ಔಪಚಾರಿಕ ಉದ್ಯೋಗ ಉದ್ಯಮಸ್ನೇಹಿ ವಾತಾವರಣವನ್ನೂ ಸೃಷ್ಟಿಸಬಲ್ಲುದು. ಅಲ್ಪಾವಧಿಯಲ್ಲಿ ಅನೌಪಚಾರಿಕ ಉದ್ಯೋಗ, ಉದ್ಯಮವಲಯದಲ್ಲಿ ಬಹಳ ಸರಳ ಮತ್ತು ಲಾಭದಾಯಕ ಎಂದೆನಿಸಿದರೂ ದೀರ್ಘಾವಧಿಯ ಬೆಳವಣಿಗೆಗೆ ಮಾರಕ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ.ಸಾಮಾಜಿಕ ಸಮಾನತೆ, ಆರ್ಥಿಕತೆಯ ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ದಿಗೆ ಪೂರಕವಾದ ಔಪ ಚಾರಿಕ ಉದ್ಯೋಗದ ಪ್ರಮಾಣದ ಹೆಚ್ಚಳಕ್ಕೆ ಅನು ಕೂಲಕರವಾದ ಮಾನವ ಅಭಿವೃದ್ಧಿ ಸ್ನೇಹಿ ಪರಿಸರದ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿದೆ. ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಉದ್ಯೋಗ, ಸಾಮಾಜಿಕ ಭದ್ರತೆ, ಲಿಂಗ ಸಮಾನತೆ ಮತ್ತು ಸಾಮಾಜಿಕ ಸಮಾನತೆಯ ಎಲ್ಲ ಹಕ್ಕುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸುವುದು ಒಂದು ಬಹುಮುಖ್ಯ ಸವಾಲಾಗಿ ಉಳಿದಿದೆ. ಔಪಚಾರಿಕ ಆರ್ಥಿಕತೆಗೆ ಪರಿವರ್ತನೆಯನ್ನು ಉತ್ತೇಜಿಸುವ ಮೂಲಕ ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ಸಾಧ್ಯ. ಅನೌಪಚಾರಿಕದಿಂದ ಔಪಚಾರಿಕ ಉದ್ಯೋಗಕ್ಕೆ ಪರಿವರ್ತನೆ ಹೊಂದಲು ಅನುಕೂಲವಾಗುವಂತೆ ಅಗತ್ಯ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. -ಡಾ| ಎ.ಜಯ ಕುಮಾರ ಶೆಟ್ಟಿ, ಉಜಿರೆ