Advertisement
ತುಟಿಯ ಮೇಲ್ಭಾಗ, ಗಲ್ಲ, ಕೆನ್ನೆ ಮೇಲೆ ಕೂದಲು ಹೆಚ್ಚಾದಾಗ, ಹುಡುಗಿಯರು ಅನಿವಾರ್ಯವಾಗಿ ಪಾರ್ಲರ್‌ಗೆ ಹೋಗಲೇ ಬೇಕು. ಆದರೆ, ಈ ಸಮಯದಲ್ಲಿ ಪಾರ್ಲರ್, ಸಲೂನ್ ಗಳಿಗೆ ಹೋಗು ವುದು ಅಷ್ಟೊಂದು ಸುರಕ್ಷಿತ ವಿಲ್ಲ. ಮುಖದ ಮೇಲಿನ ರೋಮಕ್ಕೆ ಏನು ಮಾಡೋದಪ್ಪಾ ಈಗ? ಅಂತ ಚಿಂತಿಸುವ ಅಗತ್ಯವಿಲ್ಲ, ಮನೆಮದ್ದಿನಲ್ಲಿ ಅದಕ್ಕೆ ಪರಿಹಾರವಿದೆ:
Related Articles
Advertisement
* ಪಪ್ಪಾಯ ಹಣ್ಣಿನ ತಿರುಳಿಗೆ, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.
* ಮೊಟ್ಟೆ ಮತ್ತು ಕಾರ್ನ್ ಪೌಡರ್ ಅನ್ನು ಮಿಶ್ರಣ ಮಾಡಿ ಹಚ್ಚಿ.
* ಒಂದು ಚಮಚ ಜೆಲಟಿನ್ ಪುಡಿಗೆ, 3 ಚಮಚ ಹಾಲು, ಸ್ವಲ್ಪ ಲಿಂಬೆ ಹನಿ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ತೆಳುವಾಗಿ ಹಚ್ಚಿ. 15-20 ನಿಮಿಷದ ನಂತರ ಆ ಮಾಸ್ಕನ್ನು ನಿಧಾನವಾಗಿ ಎಳೆದು ತೆಗೆಯಿರಿ.
* ಎರಡು ಚಮಚ ಹೆಸರುಕಾಳಿನ ಹಿಟ್ಟು, ಒಂದು ಚಮಚ ರೋಸ್ ವಾಟರ್, ಸ್ವಲ್ಪ ಲಿಂಬೆ ಹನಿ ಬೆರೆಸಿ ಮುಖಕ್ಕೆ ಮಸಾಜ್ ಮಾಡಿ.
ಈ ಮನೆಮದ್ದುಗಳನ್ನು ಬಳಸಿದ ತಕ್ಷಣವೇ ಪ್ರಯೋಜನ ಸಿಗದಿದ್ದರೂ, ದೀರ್ಘ ಕಾಲದ ಬಳಕೆಯಿಂದ ಪ್ರಯೋಜನ ಸಿಗಲಿದೆ.
* ಸಾವಿತ್ರಿ ಶ್ಯಾನುಭಾಗ