Advertisement

ಕಾಂಗ್ರೆಸ್‌ ಮರೆಯಿರಿ: ಡಾ|ಜಾಧವ

01:07 PM Oct 09, 2021 | Team Udayavani |

ಸೇಡಂ: ಹಿಂಸಾಚಾರ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನೇ ಮಾಡುತ್ತಾ ಬಂದ ಕಾಂಗ್ರೆಸ್‌ ಪಕ್ಷವನ್ನು ಮರೆಯಿರಿ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಕರೆ ನೀಡಿದ್ದಾರೆ.

Advertisement

ತಾಲೂಕಿನ ನಾಡೇಪಲ್ಲಿ ಗ್ರಾಮದಲ್ಲಿ ಕಾಂಗ್ರೆಸ್‌ ತೊರೆದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಯ್ಯಸ್ವಾಮಿ ಹಾಗೂ ಇತರೆ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಂಬಾಣಿ ಸಮುದಾಯ ಸೇರಿ, ಪ್ರತಿಯೊಬ್ಬರೂ ದೇಶದ ಅಭಿವೃದ್ಧಿ, ಭದ್ರತೆ ಸಲುವಾಗಿ ಕೈಜೋಡಿಸಬೇಕು. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅವನತಿಯತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಬೇಕು. ಕೋವಿಡ್‌ ವಿರುದ್ಧ ಹೋರಾಟದಲ್ಲಿ ಗಣನೀಯ ಸಾಧನೆ ಮಾಡಿದ ಭಾರತದತ್ತ ಇಡೀ ವಿಶ್ವವೇ ಮುಖ ಮಾಡಿದೆ. ಮುಂದೆ ನರೇಂದ್ರ ಮೋದಿ ಸರ್ಕಾರ ಮತ್ತಷ್ಟು ಶಕ್ತಿಯುತವಾಗಿ, ಭಾರತ ವಿಶ್ವಗುರುವಾಗಲಿದೆ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರನ್ನು ಮತ್ತೂಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕಾಂಗ್ರೆಸ್‌ನವರಿಂದ ಬಡವರ ಕಲ್ಯಾಣ ಅಸಾಧ್ಯ. ಬಿಜೆಪಿಯಲ್ಲಿ ಎಲ್ಲರನ್ನು ಸಮಾನವಾಗಿ ನೋಡುವ ಸಂಸ್ಕೃತಿ ಇದೆ. ಪಕ್ಷಕ್ಕೆ ಸೇರ್ಪಡೆ ಆದವರನ್ನು ಗೌರವಯುತವಾಗಿ ನೋಡಿಕೊಳ್ಳಲಾಗುವದು ಎಂದು ಭರವಸೆ ನೀಡಿದರು.

Advertisement

ಬಿಜೆಪಿ ಸೇರಿದ ಮಾಜಿ ಗ್ರಾಪಂ ಅಧ್ಯಕ್ಷ ಸಿದ್ಧಯ್ಯಸ್ವಾಮಿ ನಾಡೇಪಲ್ಲಿ, ಮುಖಂಡರಾದ ತಿಪ್ಪಣ್ಣ ಮಾಲೆ, ಜಗದೀಶಗೌಡ, ರಮೇಶ ಬಾಬು ಹಾಗೂ ನೂರಾರು ಜನರಿಗೆ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಚಿಮ್ಮನಚೋಡಕರ್‌, ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ, ಯುವ ಮೊರ್ಚಾ ಅಧ್ಯಕ್ಷ ಪ್ರಶಾಂತ ಕೇರಿ, ಶ್ರೀಕಾಂತರೆಡ್ಡಿ ಮುಧೋಳ, ನಾಗರೆಡ್ಡಿ ದೇಶಮುಖ, ನಾಗೇಂದ್ರಪ್ಪ ಸಿಲಾರಕೋಟ, ಗೋವಿಂದ ಯಾಕಂಬರಿ, ತಿರುಪತಿ ಶಹಬಾದಕರ್‌, ವೆಂಕಟಯ್ಯ ಮುಸ್ತಾಜರ್‌, ಶಿವಾನಂದಸ್ವಾಮಿ, ಪಾಪಯ್ಯಗೌಡ, ಚನ್ನವೀರ ನಿರ್ಣಿ, ವೆಂಕಟೇಶ ಪಾಟೀಲ, ಭೀಮರಾಯ ಹಣಮನಹಳ್ಳಿ ವೇದಿಕೆಯಲ್ಲಿದ್ದರು.

ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಓಂಪ್ರಕಾಶ ಪಾಟೀಲ ನಿರೂಪಿಸಿದರು, ರವೀಂದ್ರ ಭಂಟನಳ್ಳಿ ವಂದಿಸಿದರು.

ಬಿಜೆಪಿಯದ್ದು ಭಾರತ ಮಾತಾ ಸಂಸ್ಕೃತಿ, ಕಾಂಗ್ರೆಸ್‌ನದ್ದು ಬ್ರಿಟಿಷರ ಸಂಸ್ಕೃತಿ. ನಮ್ಮದು ಶ್ರೀರಾಮನ ದರ್ಬಾರ್‌. ಅವರದ್ದು ತುಘಲಕ್‌ ದರ್ಬಾರ್‌. ಈ ಮೂಲಕ ತಮ್ಮಲ್ಲಿರುವವರನ್ನೇ ಗೌರವಿಸದೇ ಕಾಂಗ್ರೆಸ್‌ ನಾಶದ ಹಾದಿಯತ್ತ ಸಾಗಿದೆ.

ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next