Advertisement

Madikeri ಕರಿಕೆಯಲ್ಲಿ ಕಾಡಾನೆಗಳ ಹಾವಳಿ: ತೋಟಗಳು ನಾಶ

11:32 PM Oct 06, 2023 | Team Udayavani |

ಮಡಿಕೇರಿ: ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಕಾಡಾನೆ ಹಿಂಡು ದಾಳಿ ಮಾಡಿದ ಪರಿಣಾಮ ತೋಟಗಳಿಗೆ ಹಾನಿಯಾಗಿದ್ದು, 80ಕ್ಕೂ ಅಧಿಕ ಅಡಿಕೆ, 28ಕ್ಕೂ ಹೆಚ್ಚು ತೆಂಗು ಮತ್ತು ಸುಮಾರು 50 ಬಾಳೆ ಗಿಡಗಳು ನಾಶವಾಗಿವೆ.

Advertisement

ಎಳ್ಳುಕೊಚ್ಚಿ ಗ್ರಾಮದ ರಾಘವ ಹೊಸಮನೆ, ದುಷ್ಯಂತ ಹೊಸಮನೆ ಹಾಗೂ ಚೆತ್ತುಕಾಯದ ಎಚ್‌.ಎಂ. ನಂಜುಂಡ ಅವರ ತೋಟಗಳಲ್ಲಿ ಅಪಾರ ನಷ್ಟ ಉಂಟಾಗಿದೆ. ಪ್ರತಿವರ್ಷ ಈ ಅವಧಿಯಲ್ಲಿ ಗಡಿ ರಾಜ್ಯ ಕೇರಳ ಭಾಗದಿಂದ ಕಾಡಾನೆಗಳ ಹಿಂಡು ಬಂದು ದಾಂಧಲೆ ನಡೆಸುತ್ತವೆ ಎಂದು ಸ್ಥಳೀಯ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತ ಗಡಿ ಗ್ರಾಮದ ಬಗ್ಗೆ ಕಾಳಜಿ ವಹಿಸಿ ಕಾಡಾನೆ ಉಪಟಳ ತಡೆಗೆ ಸೋಲಾರ್‌ ಬೇಲಿ ನಿರ್ಮಾಣ ಮತ್ತು ತಡೆಗೋಡೆಗೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬೆಳೆ ನಷ್ಟಕ್ಕೆ ತತಕ್ಷಣ ಪರಿಹಾರ ವಿತರಿಸಬೇಕೆಂದು ತೋಟದ ಮಾಲಕರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next