Advertisement

ಕಾಡಿಗೆ ಬೆಂಕಿ ಬೀಳದಂತೆ ಎಚ್ಚರವಹಿಸಬೇಕಾದ್ದು ಎಲ್ಲರ ಜವಾಬ್ದಾರಿ : ಅರಣ್ಯಾಧಿಕಾರಿ ಸುರೇಂದ್ರ

05:41 PM Mar 07, 2022 | Team Udayavani |

ಹುಣಸೂರು : ಮೈಸೂರು-ಬಂಟ್ವಾಳ ಹೆದ್ದಾರಿ ಪಕ್ಕದಲ್ಲೇ ಇರುವ ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಜೀವ ವೈವಿದ್ಯತೆ ಇದೆ. ಜೊತೆಗೆ ಸಾಕಷ್ಟು ಪ್ರಾಣಿಗಳು ಆಶ್ರಯ ಪಡೆದಿದ್ದು, ಅರಣ್ಯವನ್ನು ಜತನದಿಂದ ಕಾಪಾಡಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮೈಸೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಸುರೇಂದ್ರ ತಿಳಿಸಿದರು.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ ಅರಬ್ಬಿತಿಟ್ಟು ಸಂರಕ್ಷಿತ ಅರಣ್ಯ ಪ್ರದೇಶದಂಚಿನ ಗಾಗೇನಹಳ್ಳಿಯಲ್ಲಿ ಅರಣ್ಯ ಬೆಂಕಿಯಿಂದ ಕಾಡು ಸಂರಕ್ಷಿಸುವ ಕುರಿತು ಏರ್ಪಡಿಸಿದ್ದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು. ಅರಣ್ಯ ಈ ನಾಡಿನ ಸಂಪತ್ತು, ಅಡವಿ ಇಲ್ಲದಿದ್ದಲ್ಲಿ ಮಾನವ-ವನ್ಯಜೀವಿಗಳಿಗೆ ಆಪತ್ತು, ಹೀಗಾಗಿ ಅರಣ್ಯಕ್ಕೆ ಬೆಂಕಿ ಬೀಳದಂತೆ ಮುಂಜಾಗ್ರತೆವಹಿಸುವಲ್ಲಿ ಅರಣ್ಯದಂಚಿನ ಗ್ರಾಮಸ್ಥರ ಹೊಣೆಗಾರಿಕೆ ಹೆಚ್ಚಿದೆ.

ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಜೀವ ವೈವಿದ್ಯತೆ ಇದೆ. ಇಲ್ಲಿ ಸಾಕಷ್ಟು ಪ್ರಾಣಿಗಳು ಆಶ್ರಯ ಪಡೆದಿವೆ. ಕಾಡು ಇರುವುದರಿಂದ ನಾಡಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ಅರಿಯಬೇಕು. ಕಾಡಿಗೆ ತಂತಾನೆ ಬೆಂಕಿ ಬೀಳುವುದಿಲ್ಲ. ಕಿಡಿಗೇಡಿಗಳು, ದಾರಿ ಹೋಕರು ಬೀಡಿ-ಸಿಗರೇಟು ಸೇದಿ ಬಿಸಾಡುವುದರಿಂದ ಬೆಂಕಿ ಬೀಳಲಿದೆ. ಆದ್ದರಿಂದ ಯಾರೂ ಕೂಡ ಇಂತಹ ಕೆಲಸ ಮಾಡಬಾರದು, ಒಂದೊಮ್ಮೆ ಬೆಂಕಿ ಕಾಣಿಸಿಕೊಂಡಲ್ಲಿ ತಕ್ಷಣವೇ ಇಲಾಖೆಗೆ ಮಾಹಿತಿ ನೀಡುವ ಜೊತೆಗೆ ಬೆಂಕಿ ನಂದಿಸಲು ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು.

ಕೆ.ಆರ್.ನಗರದ ಕಲಾ ಜಾಗೃತಿ ತಂಡದವರಿAದ ಬೀದಿ ನಾಟಕ ಆಯೋಜಿಸಲಾಗಿತ್ತು. ಗ್ರಾ.ಪಂ.ಸದಸ್ಯರಾದ ರಾಜೇಶ್, ರಘು, ಪಿಡಿಓ ಮುತ್ತುಲಕ್ಷಿö್ಮ, ಡಿ.ಆರ್.ಎಫ್.ಓ.ರಾಘವೇಂದ್ರ ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next