ಹುಣಸೂರು: ಸದಾ ಪರಿಸರ ಪೂರಕ ಚಿಂತನೆ ನಡೆಸಿದ್ದ, ನಾಗರಹೊಳೆ ಉದ್ಯಾನದಲ್ಲಿ ಹಲವು ಪ್ರಥಮಗಳ ಜನಕ, ಒಂಟಿ ಸಲಗನ ದಾಳಿಗೆ ಸಿಲುಕಿದ ನಾಗರಹೊಳೆ ಹುಲಿಯೋಜನೆ ನಿರ್ದೇಶಕರಾಗಿದ್ದ ಮಣಿಕಂದನ್ ವಿಶ್ವ ವನ್ಯಜೀವಿಗಳ ದಿನವೇ ಬಲಿಯಾಗಿ ಇಂದಿಗೆ ಮೂರು ವರ್ಷ. ಅವರ ಕಾರ್ಯಕ್ರಮಗಳು ಉದ್ಯಾನದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ. ಸರಳ ವ್ಯಕ್ತಿತ್ವದ, ತಮಿಳುನಾಡು ಮೂಲದ
ಮಣಿಕಂದನ್ ತಮ್ಮ ಅವಧಿಯಲ್ಲಿ ಹಲವಾರು ಯೋಜನೆ ರೂಪಿಸಿ ಅರಣ್ಯ ಸಂರಕ್ಷಣೆಗಾಗಿ ನಾಂದಿಹಾಡಿದ್ದರು. ನಾಗರಹೊಳೆ ಉದ್ಯಾನದ ಕೆರೆ- ಕಟ್ಟೆಗಳಲ್ಲಿ ನೀರು ಖಾಲಿಯಾಗಿ ಸಂಪೂರ್ಣ ಬತ್ತಿಹೋಗಿ ವನ್ಯಜೀವಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದುದನ್ನು ಮನಗೊಂಡು ಉದ್ಯಾನದಲ್ಲಿ ಸೋಲಾರ್ ಪಂಪ್‌ಸೆಟ್ ಮೂಲಕ ಕೆರೆ-ಕಟ್ಟೆಗಳಿಗೆನೀರು ತುಂಬಿಸುವ ಯೋಜನೆ ಸಾಕಾರಗೊಂಡಿದ್ದು. ಅವರ ಭಗೀರಥ ಪ್ರಯತ್ನ ಇಂದಿಗೂ ಸಾಕ್ಷಿಯಾಗಿದೆ. ಉದ್ಯಾನದಲ್ಲಿನ ಅಭಿವೃದ್ಧಿಗಾಗಿ ತುಡಿಯುತ್ತಿದ್ದ ಮಣಿಕಂದನ್ ಆನೆಗಳ ಬಗ್ಗೆ ವಿಶೇಷ ತರಬೇತಿ ಪಡೆದಿದ್ದರಲ್ಲದೆ, ಆನೆಯಿಂದಲೇ ಸಾವನ್ನಪ್ಪಿದ್ದು ಮಾತ್ರ ದುರಂತ.
ಅರಣ್ಯ ರಕ್ಷಣೆಗೆ ಉಪ ಕ್ರಮ: ಬೆಂಕಿಯಿಂದ ಅರಣ್ಯ ರಕ್ಷಣೆಗಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದರು. ಹುಲಿ-ಆನೆ ಗಣತಿಗೆ ಹೊಸ ಮಾದರಿ ಜಾರಿ ಮಾಡಿದ್ದು, ಹೊಸ ಸಫಾರಿ ವಾಹನ ಗಳ ವ್ಯವಸ್ಥೆ, ಕಾಡಿನಲ್ಲಿ ಸುತ್ತುವ ಸಿಬ್ಬಂದಿಗಳಿಗೆವಿಮೆ, ಅಪಾಯಕ್ಕೆ ಸಿಲುಕಿದಾಗ ಅತ್ಯುತ್ತಮಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಬೇಕೆಂಬ ಯೋಜನೆ ಜಾರಿಗೆ ತಂದಿದ್ದರು.
ಮಣಿಕಂದನ್ ಹೆಸರು ಚಿರಸ್ಥಾಯಿ: ಮಣಿ ಕಂದನ್ ಹೆಸರು ಚಿರಸ್ಥಾಯಿಯಾಗಿಸಲು ಉದ್ಯಾನದ ಮತ್ತಿಗೋಡು ಆನೆ ಶಿಬಿರದ ವರಲಕ್ಷ್ಮೀಯ ಗಂಡು ಮರಿಗೆ, ವೀರನಹೊಸಹಳ್ಳಿ ಭೀಮನಕಟ್ಟೆ ಬಳಿಯ ಕಳ್ಳಬೇಟೆ ತಡೆ ಶಿಬಿರ ಹಾಗೂ ಹುಣಸೂರು ವಲಯದ ಐಯ್ಯನಕೆರೆ ಹಾಡಿ ಬಳಿ ನಿರ್ಮಿಸಿರುವವೀಕ್ಷಣಾಗೋಪುರಕ್ಕೆ ಮಣಿಕಂದನ್ ಹೆಸರನ್ನಿಡಲಾಗಿದೆ. ಅಲ್ಲದೇ ಅವರ ಹೆಸರಿನಲ್ಲಿ ಉತ್ತಮ ಕಾರ್ಯನಿರ್ವಹಿಸುವ ಅರಣ್ಯಸಿಬ್ಬಂದಿಗಳಿಗೆ ನೀಡಲಾಗುತ್ತಿದೆ.
–ಸಂಪತ್ ಕುಮಾರ್