Advertisement

Forest Officer; ಅರಂತೋಡು: ಅಕ್ರಮ ಮರ ಸಾಗಾಟ ಪತ್ತೆ

12:32 AM Sep 21, 2023 | Team Udayavani |

ಅರಂತೋಡು: ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲ್‌ ಭಾಗದಿಂದ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಮಂಗಳವಾರ ರಾತ್ರಿ ಸುಳ್ಯ ಅರಣ್ಯಾಧಿಕಾರಿಗಳು ಪೈಂಬೆಚ್ಚಾಲು ಸಮೀಪ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಕಾದು ನಿಂತು ಮರಗಳನ್ನು ಸಾಗಾಟ ಮಾಡುತ್ತಿದ್ದ ಒಂದು ಮಿನಿ ಲಾರಿ ಹಾಗೂ ಒಂದು ಪಿಕಪ್‌ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಾಹನ ಮತ್ತು ಮರದ ಜತೆಗೆ ಮರಸಾಗಾಟ ಮಾಡುತ್ತಿದ್ದವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವುದಾಗಿಯೂ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next