Advertisement

ಅಂತರಸಂತೆ ಅರಣ್ಯದಲಿ ಬೆಂಕಿರೇಖೆ ಕಾರ್ಯಾಚರಣೆ ಬಹುತೇಕ ಪೂರ್ಣ ಎಚ್‌.ಬಿ.ಬಸವರಾಜು.

12:56 PM Jan 16, 2021 | Team Udayavani |

ಎಚ್‌.ಡಿ.ಕೋಟೆ: ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ತಡೆತಟ್ಟುವ ಉದ್ದೇಶದಿಂದ 238 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿ ರೇಖೆ (ಫೈರ್‌ಲೈನ್‌) ಕಾರ್ಯಾಚರಣೆ ಪೂರ್ಣ ಗೊಳಿಸಿರುವುದಾಗಿ ಅರಣ್ಯ ಇಲಾಖೆಯಿಂದ ತಿಳಿದು ಬಂದಿದೆ.

Advertisement

ತಾಲೂಕು ವಿಶಾಲವಾದ ಅರಣ್ಯ ಪ್ರದೇಶ ಹೊಂದಿದ್ದು, ಏಷ್ಯಾದಲ್ಲೇ ಹೆಚ್ಚಿನ ಹುಲಿ ಅವಾಸ ಸ್ಥಾನ ಅನ್ನುವ ಕೀರ್ತಿಗೆ ಎಚ್‌.ಡಿ.ಕೋಟೆ ಪಾತ್ರ ವಾಗಿದೆ. ಅಲ್ಲದೇ ಕಪ್ಪು ಚಿರತೆ, ಕಾಡಾನೆಗಳು, ಕಾಡೆಮ್ಮೆ, ಜಿಂಕೆಗಳು, ಕಡವೆ ಸೇರಿದಂತೆ ವನ್ಯ ಜೀವಿಗಳ ಅವಾಸಸ್ಥಾನ ಅನಿಸಿಕೊಂಡಿರುವ ತಾಲೂಕಿನಲ್ಲಿ ವಿಶಾಲವಾಗಿ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶ ಆವರಿಸಿಕೊಂಡಿದೆ.

ಬೇಸಿಗೆ ಕಾಲ ಆರಂಭಗೊಳ್ಳುತ್ತಿದ್ದಂತೆಯೇ ಕಾಡ್ಗಿಚ್ಚು ಕಾಣಿಸಿಕೊಂಡು ಬಹುತೇಕ ಅರಣ್ಯ ಸಂಪತ್ತು ನಾಶವಾಗುವುದರ ಜೊತೆಗೆ ವನ್ಯಜೀವಿ ಗಳ ಜೀವಕ್ಕೂ ಸಂಚಕಾರ ಬಂದಿತ್ತು. ಹೀಗಾಗಿ ಅರಣ್ಯದ ಸಂರಕ್ಷಣೆ ದೃಷ್ಟಿಯಿಂದ ಸರ್ಕಾರ ಪ್ರತಿವರ್ಷ ಅರಣ್ಯ ಇಲಾಖೆ ಮೂಲಕ ವಿಶೇಷ ಅನುದಾನ ಬಿಡುಗಡೆಗೊಳಿಸಿ ಅರಣ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಬೆಂಕಿ ರೇಖೆ ಗಳನ್ನು ನಿರ್ಮಿಸಿ ಕಾಡ್ಗಿಚ್ಚು ಅರಣ್ಯ ಆವರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶ ನೀಡುತ್ತದೆ.

ಇದನ್ನೂ ಓದಿ:ಬೇಗೂರು ಬಳಿ ಮಿತಿಮೀರಿದ ಕಾಡಾನೆ ದಾಳಿ

ಅದರಂತೆಯೇ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಅದರಲ್ಲೂ ವಿಶೇಷ ವಾಗಿ ಕಾಡಂಚಿನಲ್ಲಿ ವಾಸವಾಗಿರುವ ಆದಿವಾಸಿ ಗರನ್ನು ಬಳಕೆ ಮಾಡಿಕೊಂಡು ಅರಣ್ಯದೊಳಗೆ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಈ ಬಾರಿಯೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರ ಸಂತೆ ಅರಣ್ಯ ವಲಯಕ್ಕೆ ಸೇರಿದ ಸುಮಾರು 236 ಕಿ.ಮೀ. ಅರಣ್ಯ ಪ್ರದೇಶದಲ್ಲಿ ಫೈರ್‌ಲೈನ್‌ ಮಾಡಿದ ಜಾಗಗಳಲ್ಲಿ ಶೇಖರಣೆಯಾಗಿದ್ದ ತ್ಯಾಜ್ಯ ವಸ್ತುಗಳಿಗೆ ಬೆಂಕಿ ಹೊತ್ತಿಸುವ ಕಾರ್ಯ ನಡೆಯುತ್ತಿದೆ.

Advertisement

ಆದಿವಾಸಿಗರಿಗೆ ಆದ್ಯತೆ: ಅರಣ್ಯದಲ್ಲಿ ಬೆಂಕಿರೇಖೆ ನಿರ್ಮಾಣ ಮತ್ತು ಅರಣ್ಯ ಸಂರಕ್ಷಣೆಗೆ ಕಾಡಂ ಚಿನಲ್ಲಿ ವಾಸಿವಾಗಿರುವ ಆದಿವಾಸಿಗರನ್ನೇ ಬಹು ಸಂಖ್ಯೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಅರಣ್ಯ ಇಲಾಖೆಗೆ ಅಗತ್ಯವಾಗಿ ಬೇಕಾದ ವಾಚರ್‌ಗಳು, ರಾತ್ರಿ ಕಾವಲುಗಾರರು ಸೇರಿದಂತೆ ಇನ್ನಿತರ ಕೆಲಸಗಳಿಗೆ ಹೆಚ್ಚಿನ ಆದ್ಯತೆ ಆದಿವಾಸಿ ಗರೇ ನೀಡಲಾಗಿದೆ. ಈಗಲೂ ಬಹುತೇಕ ಅರಣ್ಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಆದಿವಾಸಿಗರೇ ಬಹುಸಂಖ್ಯೆಯಲ್ಲಿದ್ದಾರೆ. ತುಂತುರು ಮಳೆಯಿಂದ ಉಪಯೋಗವಿಲ್ಲ: ಪ್ರತಿವರ್ಷ ಜೂನ್‌ ಮೊದಲ ವಾರದಲ್ಲಿ ಆರಂಭ ಗೊಳ್ಳುತ್ತಿದ್ದ ಮಳೆ ಈ ಬಾರಿ ಆಗಾಗ ಬೀಳುತ್ತಿದೆ ಯಾದರೂ ಅರಣ್ಯಕ್ಕೆ ಇರದಿಂದ ಏನೂ ಉಪ ಯೋಗವಿಲ್ಲ.

ಆಗಾಗ ಬೀಳುವ ಮಳೆ ಸತತ ವಾರಗಟ್ಟಲೆ ಸುರಿದರೆ ಭೂಮಿ ತಂಪಾಗಿ ಹಸಿರು ಬೆಳೆಯುವುದರಿಂದ ಅರಣ್ಯಕ್ಕೆ ಬೆಂಕಿ ಬೀಳುವು ದಿಲ್ಲ ಅನ್ನಬಹುದು. ಇಲ್ಲಿ ಆಗಾಗ ತುಂತುರು ಮಳೆ ಬೀಳುತ್ತಿರುವುದರಿಂದ ಉಪಯೋಗವಿಲ್ಲ. ಒಟ್ಟಾರೆ ಹೇಳುವುದಾದರೆ ಬೇಸಿಗೆ ಆರಂಭ ಗೊಳ್ಳುತ್ತಿರುವುದರಿಂದ ತಾಲೂಕಿನ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶಗಳ ಬೆಂಕಿರೇಖೆ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದ್ದು ಯಾವುದೇ ಅನಾಹುತವಾಗುವುದಿಲ್ಲ ಅನ್ನುವ ವಿಶ್ವಾಸ ಅರಣ್ಯ ಇಲಾಖೆ ಮೂಲಗಳಿಂದ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next