Advertisement
ಯುವಕನನ್ನು ಬಲಿ ಪಡೆದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿಯೊಂದಿಗೆ ನಾಗರಹೊಳೆ ಮುಖ್ಯಸ್ಥ ಮಹೇಶ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆನಡೆಸಿ, ಹುಣಸೂರು ವಲಯದ ನೇರಳಕುಪ್ಪೆಬಿ.ಹಾಡಿ ಬಳಿಯಲ್ಲಿ ಬೇಸ್ ಕ್ಯಾಂಪ್ ತೆರೆದಿದ್ದು, ಸೆ.9 ರಿಂದಲೇ ಹುಲಿಸೆರೆಗೆ ತಾಂತ್ರಿಕ ತಂಡ, ಟ್ರ್ಯಾಕಿಂಗ್ ತಂಡ, ಅರವಳಿಕೆ ಚುಚ್ಚುಮದ್ದು ನೀಡುವ ತಂಡ, ಆರ್. ಆರ್. ಟಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಪ್ರಚಾರ ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.
Related Articles
Advertisement
ಜಾನುವಾರು ಮೇಲೆ ದಾಳಿ : ಕಾರ್ಯಾಚರಣೆ ನಡುವೆಯೇ ಶನಿವಾರದಂದು ಉದ್ಯಾನದಂಚಿನ ಕಿಕ್ಕೇರಿಕಟ್ಟೆ ಬಳಿ ಗಣೇಶರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಅದೇ ಹುಲಿ ಇರಬಹುದೆಂದು ಶಂಕಿಸಲಾಗಿದ್ದು, ಆಭಾಗದಲ್ಲೂ ಹೆಚ್ಚಿನ ಕ್ಯಾಮರಾ ಅಳವಡಿಸಲಾಗುವುದು. ಕೂಂಬಿಂಗ್ ನಡೆಸಲಾಗುವುದು. ಗಾಯಗೊಂಡಿರುವ ಹಸುವಿಗೆ ಇಲಾಖೆಯ ವೈದ್ಯ ಡಾ.ರಮೇಶ್ ರವರೇ ಚಿಕಿತ್ಸೆ ನೀಡಿದ್ದಾರೆ.
ಜಗ್ಗದ ಜನ- ಕಾಡಿನತ್ತ ದನಗಳು : ಅಯ್ಯನಕೆರೆ ಹಾಡಿಯಂಚಿನಲ್ಲೇ ಹುಲಿ ದಾಳಿಯಿಂದ ಗಣೇಶ ಸಾವಿನ ಘಟನೆ ಸಂಭವಿಸಿದ್ದರೂ ಹೆದರದ ಅಕ್ಕಪಕ್ಕದ ಹಳ್ಳಿಯ ಜನರು ಹೆದರಿದಂತೆ ಕಾಣುತ್ತಿಲ್ಲ, ಅರಣ್ಯದಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿರುವುದು, ಸೌದೆ ತರುತ್ತಿರುವುದು ಅಲ್ಲದೆ ಜನರು ಕಾಡಿನಲ್ಲಿ ಅಡ್ಡಾಡುತ್ತಿರುವುದು ಕಂಡುಬಂದಿದ್ದು, ಅಲ್ಲದೆ ಕಳ್ಳಭೇಟೆ ಹಾಗೂ ಕ್ಯಾಮರಾ ಕಳ್ಳತನ ಸಹ ನಡೆದಿದ್ದು, ಹುಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಗ್ರಾಮಸ್ಥರು ಸಹಕಾರ ನೀಡಿ, ಎಸಿಎಫ್ ಸತೀಶ್ ಮನವಿ : ಹಳ್ಳಿಗಳಲ್ಲಿ ಕಾಡಿಗೆ ಯಾರೂ ಬರಬಾರದು, ಜಾನುವಾರುಗಳನ್ನು ಬಿಡಬಾರದೆಂದು ನಿತ್ಯ ವ್ಯಾಪಕ ಪ್ರಚಾರ ಮಾಡುತ್ತಿದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದರಿಂದ ನಮಗೂ ಹಾಗೂ ಇಲಾಖೆ ಸಿಬ್ಬಂದಿಗಳಿಗೂ ನೋವುಂಟಾಗಿದೆ. ಕಾರ್ಯಾಚರಣೆ ನಿಲ್ಲಿಸಿ ಪೆಟ್ರೋಲಿಂಗ್ ಕಡೆಗೆ ಗಮನಹರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಎ ಸಿ ಎಫ್. ಸತೀಶ್ ರವರು ಇನ್ನಾದರೂ ಇಲಾಖೆಯೊಂದಿಗೆ ಹಳ್ಳಿಗರು ಸಹಕಾರ ನೀಡಬೇಕೆಂದು ಕಳಕಳಿಯ ಮನವಿ ಮಾಡಿದರು. ಗೋಷ್ಟಿಯಲ್ಲಿ ಕಾರ್ಯಾಚರಣೆ ತಂಡಗಳ ಮುಖ್ಯಸ್ಥರು, ಸಿಬ್ಬಂದಿಗಳು ಇದ್ದರು.
ಜಿಂಕೆ ಭೇಟೆ-ಕ್ಯಾಮರಾ ಕಳ್ಳತನ : ಒಂದೆಡೆ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿರುವ ನಡುವೆಯೇ ಶುಕ್ರವಾರ ರಾತ್ರಿ ನಾಲ್ಕು ಟ್ರಾಪಿಂಗ್ ಕ್ಯಾಮರಾಗಳನ್ನು ಕಳ್ಳತನ ಮಾಡಲಾಗಿದೆ, ಅಲ್ಲದೆ ಭೇಟೆಗಾರರು ಜಿಂಕೆಯನ್ನು ಭೇಟೆಯಾಡಿದ್ದು, ಗಂಭೀರವಾಗಿ ಪರಿಗಣಿಸಿದ್ದು, ಖಚಿತ ಮಾಹಿತಿ ಮೇರೆಗೆ ಹನಗೋಡಿಗೆ ಸಮೀಪದ ಶಿಂಡೇನಹಳ್ಳಿ ಸುಜೇಂದ್ರನ ಮನೆ ಮೇಲೆ ದಾಳಿಮಾಡಿ ಎರಡು ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಅಲ್ಲದೆ ಕ್ಯಾಮರಾ ಕಳುವಿನ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಮಂಗಳೂರು : ಹೊಯ್ಗೆ ಬಜಾರ್ ಸಮುದ್ರ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ