Advertisement
ಬೆಂಕಿ ತಡೆಗೆ 35 ಕ್ಯಾಂಪ್ಕಾರ್ಕಳ, ಉಡುಪಿ, ಚಿಕ್ಕಮಗಳೂರು ವಿಭಾಗಕ್ಕೆ ಒಳಪಟ್ಟಂತೆ ಮೂಕಾಂಬಿಕಾ ವನ್ಯಜೀವಿ ಅಭಯಾ ಆರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ 1,000 ಕಿ.ಮೀ. ಪ್ರದೇಶದಲ್ಲಿ 35 ಕ್ಯಾಂಪ್ ರಚಿಸಿ ಪ್ರತೀ ಕ್ಯಾಂಪ್‌ಗೆ ನಾಲ್ವರಂತೆ ಒಟ್ಟು 140 ಸಿಬಂದಿಯನ್ನುನಿಯೋಜಿಸಲಾಗಿದೆ. ಅವರು ಜನವರಿಯಿಂದ ಎಪ್ರಿಲ್ ವರೆಗೆ ನಿಗಾ ವಹಿಸುತ್ತಾರೆ.
ಬಂಡೀಪುರದಲ್ಲಿ 2019ರಲ್ಲಿ ಕಾಳ್ಗಿಚ್ಚಿನಿಂದ 11 ಸಾವಿರ ಎಕ್ರೆಗೂ ಹೆಚ್ಚು ಅರಣ್ಯ ಸುಟ್ಟು ಹೋಗಿತ್ತು. ಎಚ್ಚೆತ್ತುಕೊಂಡ ಇಲಾಖೆ ಕಳೆದ ವರ್ಷ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿತ್ತು. ಇದರಿಂದಾಗಿ ಬಂಡೀಪುರ ಸಹಿತ ಇತರ ಎಲ್ಲೂ ದೊಡ್ಡಮಟ್ಟದ ಕಾಳಿYಚ್ಚು ಕಂಡು ಬಂದಿರಲಿಲ್ಲ. ಇದನ್ನೂ ಓದಿ:ಚಾಲಕನಿಗೆ ಪೀಡ್ಸ್ ; ಬರೋಬ್ಬರಿ 10ಕಿ.ಮೀ. ಬಸ್ ಚಲಾಯಿಸಿದ ಪ್ರಯಾಣಿಕ ಮಹಿಳೆ! ವಿಡಿಯೋ ವೈರಲ್
Related Articles
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅತ್ಯಪರೂಪದ ಹುಲ್ಲುಗಾವಲುಗಳಿದ್ದು ಶೋಲಾ ಕಾಡುಗಳು ಆವರಿಸಿವೆ. ವಿಶೇಷ ಪ್ರಬೇಧಗಳ ಸರೀಸೃಪಗಳು, ಸಸ್ಯರಾಶಿ, ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವಾಗಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಕುದುರೆಮುಖ ಉದ್ಯಾನವನ ವ್ಯಾಪ್ತಿಯ ಕಾರ್ಕಳ ವಿಭಾಗದಲ್ಲಿ ಚಾರ್ಮಾಡಿ ಯಿಂದ ನಾರಾವಿ ವರೆಗೆ, ಉಡುಪಿ ವಿಭಾಗದಲ್ಲಿ ಈದು-ಕೊಲ್ಲೂರು, ಕೊಡಚಾದ್ರಿ ವರೆಗೆ, ಚಿಕ್ಕಮಗಳೂರು ವಿಭಾಗದ ಕುದುರೆಮುಖದಿಂದ ಕೆರೆಕಟ್ಟೆ ವರೆಗೆ ಒಟ್ಟು 125 ಕಿ.ಮೀ. ಬೆಂಕಿ ರೇಖೆ ನಿರ್ಮಿಸುತ್ತಿದೆ. ಸಂಸೆಯ ಎಳನೀರು, ದಿಡುಪೆಯ ಮಲ್ಲ, ಸವಣಾಲು, ಗುಂಡಲ್ ಪಾದೆ, ಮಲೆಕ್ಕಿಲದಲ್ಲಿ ಫೈರ್ ಕ್ಯಾಂಪ್ ರಚಿಸಿ 25 ಕಾವಲುಗಾರರನ್ನು ನಿಯೋಜಿಸಲಾಗಿದೆ.
Advertisement
ಏನಿದು ಬೆಂಕಿ ರೇಖೆ ?ಕಾಳ್ಗಿಚ್ಚು ಸಂಭವಿಸಬಹುದಾದ ಪ್ರದೇಶಗಳ ಅರಣ್ಯದಂಚಿನಲ್ಲಿ ನಿರ್ದಿಷ್ಟ ಅಗಲಕೆ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸಿ ಬೆಂಕಿ ವ್ಯಾಪಿಸದಂತೆ ತಡೆಯುವುದೇ ಬೆಂಕಿ ರೇಖೆ. ಕಾಳ್ಗಿಚ್ಚು ತಪ್ಪಿಸಲು ಇಲಾಖೆಯು ಬೆಂಕಿ ರೇಖೆ ನಿರ್ಮಿಸುವುದಲ್ಲದೆ ಕಾವಲುಗಾರರನ್ನೂ ಇರಿಸಿದೆ.
ಆದರೂ ಕಾಳ್ಗಿಚ್ಚಿನ ವಿಚಾರದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರ ಮುತುವರ್ಜಿ ಅತ್ಯಗತ್ಯ.
– ರುದ್ರೇನ್ ಪಿ., ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ