Advertisement
ಗ್ರಾಮದ ರೈತರಾದ ತಾಯಮ್ಮ, ಲೋಕೇಶ್, ಶಿವಮಲ್ಲಣ್ಣ, ಬಿ.ಎಂ. ಕೃಷ್ಣಪ್ಪ, ಅಂಗಡಿ ಪ್ರಮೋದ್, ಕೃಷ್ಣಪ್ಪ ಶಂಕರೇಗೌಡ, ತಿಮ್ಮೇಗೌಡ, ಅಂಗಡಿ ರಾಮಣ್ಣ ಅವರ ಭತ್ತ ಹಾಗೂ ರಾಗಿ ಬೆಳೆ ಮತ್ತು ಹಲವು ರೈತರ ಮಾವು ಬೆಳೆಗೆ ಹಾನಿಯಾಗಿವೆ.
ಒಂದು ತಿಂಗಳಿನಿಂದ ಪಟ್ಟದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ರಾತ್ರಿ ವೇಳೆ ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಪರಿಹಾರವನ್ನೂ ನೀಡುತ್ತಿಲ್ಲ ಎಂದು ಗ್ರಾಮದ ಮುಖಂಡ ಬಿ.ಜೆ.ಲೋಕೇಶ್ ಆರೋಪಿಸಿದ್ದಾರೆ. ಹಾಗೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಬೇಕು, ಸತತವಾಗಿ ನಷ್ಟ ಅನುಭಸುತ್ತಿರುವ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮದ ಮುಖಂಡ ಜಿ.ರಾಘವೇಂದ್ರ ಒತ್ತಾಯಿಸಿದ್ದಾರೆ.